- ಈ ವಾರ ತೆರೆಕಾಣಲಿದೆ “ಫಸ್ಟ್ ಡೇ ಫಸ್ಟ್ ಶೋ” ಸಿನಿಮಾ
- ಗಮನ ಸೆಳೆಯುತ್ತಿದೆ ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್
- ಗಿರೀಶ್ ಆಕ್ಷನ್ ಕಟ್ ಹೇಳಿರುವ ಸಿನಿಮಾವನ್ನು ಊರ್ಮಿಳಾ ಕಿರಣ್ ನಿರ್ಮಾಣ ಮಾಡಿದ್ದಾರೆ.
ಸಿನಿ ಪ್ರಿಯರಿಗೆ ತಮ್ಮ ನೆಚ್ಚಿನ ನಟ, ನಟಿಯರ ಸಿನಿಮಾಗಳ ಫಸ್ಟ್ ಡೇ ಫಸ್ಟ್ ಶೋ ನೋಡೋದೊಂದು ಹಿಂದಿನಿಂದಲೂ ಬಂದಿರೋ ಕ್ರೇಜ್. ಆದರೆ ಇತ್ತೀಚೆಗೆ ಒಟಿಟಿಗಳು ಹೆಚ್ಚು ಬೆಳಕಿಗೆ ಬಂದ ನಂತರ ಈ ಕ್ರೇಜ್ ಕಡಿಮೆಯಾಗುತ್ತಿದೆಯನೋ ಎಂದೆನಿಸುವ ಸಂದರ್ಭದಲ್ಲಿ ಬಂದಿದೆ “ಫಸ್ಟ್ ಡೇ ಫಸ್ಟ್ ಶೋ” First Day First Show ಸಿನಿಮಾ. “ಒಂದ್ ಕಥೆ ಹೇಳ್ಲಾ” ಖ್ಯಾತಿಯ ನಿರ್ದೇಶಕ ಗಿರೀಶ್ Gireesh ಅವರು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದು, ಬಂಡವಾಳ ಹೂಡಿದ್ದಾರೆ ಊರ್ಮಿಳಾ ಕಿರಣ್ Urmila Kiran. ಗಿರೀಶ್ ಜಿ, ಜೀವಿತಾ ವಸಿಷ್ಟ, ಅನಿರುದ್ಧ ಶಾಸ್ತ್ರಿ, ರೋಹಿತ್ ಶ್ರೀನಾಥ್, ಬಿಎಂ ವೆಂಕಟೇಶ್, ಗಿಲ್ಲಿ ನಟ, ರೇಷ್ಮಾ ಲಿಂಗರಾಜಪ್ಪ, ಚಂದ್ರು, ಹರೀಶ್ ಅರಸು, ಶ್ಯಾಮ್, ಶೋಭಿತಾ ಶಿವಣ್ಣ, ಗಣೇಶ್, ಪ್ರಶಾಂತ್ ವೈಎನ್ ಮುಂತಾದವರು ಅಭಿನಯಿಸಿದ್ದಾರೆ.

ಇದು ಸಿನಿಮಾ ಮಂದಿಯ ಕಥೆ
ಶೀರ್ಷಿಕೆಯೇ ಹೇಳುವಂತೆ ಇದು ಸಿನಿಮಾ ಜಗತ್ತಿನ ಕಥೆಯನ್ನೇ ಕಥಾಹಂದರವಾಗಿ ಹೊಂದಿರುವ ಸಿನಿಮಾ. ಸಿನಿಮಾ ಮಂದಿಯ ಬಗ್ಗೆ ಬಂದಿರುವ ಹಲವು ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗುವ ಇನ್ನೊಂದು ವಿಭಿನ್ನ ಸಿನಿಮಾ ಇದಾಗಿದೆ. ಟ್ರೇಲರ್ ನಿಂದಲೇ ಜನರ ಮನಸ್ಸಲ್ಲಿ ಕುತೂಹಲ ಮೂಡಿಸುತ್ತಿದೆ ಈ ಸಿನಿಮಾ. ರಾಕೇಶ್ ಸಿ. ತಿಲಕ್ ಮತ್ತು ಅರುಣ್ ಕುಮಾರ್ ಅವರ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ ಈ ಸಿನಿಮಾಗಿದೆ. ಸ್ವಾಮಿನಾಥನ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ಜುಲೈ 11 ಕ್ಕೆ ಸಿನಿಮಾದ “ಫಸ್ಟ್ ಡೇ ಫಸ್ಟ್ ಶೋ” ಇರಲಿದೆ.
