- ಕಾಮಿಡಿ ಜೊತೆ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಡಲು ಬರ್ತಿದ್ದಾರೆ “ಫ್ರಾಡ್ ಋಷಿ”
- ಹೊಸತೊಂದು ಕಾಮಿಡಿ ಜಾನರ್ ಇರುವ ಸಿನಿಮಾ “ಫ್ರಾಡ್ ಋಷಿ” ರೆಡಿಯಾಗುತ್ತಿದೆ.
- ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಚಿತ್ರವಾಗಿದೆ.
ಕನ್ನಡದಲ್ಲಿ ಕಾಮಿಡಿ ಜಾನರ್ ಚಿತ್ರಕ್ಕೆ ತನ್ನದೇ ಆದ ಫ್ಯಾನ್ಸ್ ಇದ್ದಾರೆ. ಇದೀಗ ಹೊಸತೊಂದು ಕಾಮಿಡಿ ಜಾನರ್ ಇರುವ ಸಿನಿಮಾ “ಫ್ರಾಡ್ ಋಷಿ” Fraud Rushi ರೆಡಿಯಾಗುತ್ತಿದೆ. ಈ ಸಿನಿಮಾ ಚಿತ್ರೀಕರಣದ ಮೊದಲೇ ಲಿರಿಕಲ್ ಹಾಡೊಂದನ್ನು ರಿಲೀಸ್ ಕೂಡ ಮಾಡಿ ಸೌಂಡ್ ಮಾಡ್ತಿದೆ. ನಮ್ ಋಷಿ ಅವರು ಈ ಸಿನಿಮಾವನ್ನು ತಮ್ಮ ಸಂಸ್ಥೆ ನಮ್ ಋಷಿ ಪ್ರೊಡಕ್ಶನ್ Nam Rushi Foundation ಮೂಲಕ ನಿರ್ಮಿಸುತ್ತಿದ್ದಾರೆ. ನಿರ್ದೇಶನ, ಕಥೆ, ಚಿತ್ರಕಥೆ, ಗೀತರಚನೆ, ಸಂಭಾಷಣೆ ಕೂಡ ಅವರದ್ದೇ ಆಗಿದೆ.
ಚಿತ್ರದಲ್ಲಿರಬೇಕಾದ ಎಲ್ಲಾ ಅಂಶಗಳೂ ಇಲ್ಲಿದೆ
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಫ್ರಾಡ್ ಋಷಿ” ಕಾಮಿಡಿ ಎಲಿಮೆಂಟ್ ಗಳ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವ ಚಿತ್ರವಾಗಿದೆ. ಒಂದು ಚಿತ್ರದಲ್ಲಿರಬೇಕಾದ ಎಲ್ಲಾ ಅಂಶಗಳೂ ಇಲ್ಲಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ ಏಳು ಹಾಡುಗಳಿದೆ. ಅದರಲ್ಲಿ ನಾಲ್ಕು ಹಾಡುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಿ, ಚಿತ್ರತಂಡ ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರದಲ್ಲಿ ನಮ್ ಋಷಿ, ಸ್ವಾತಿ, ಮಧು ಬಿ, ಹರಿಕೃಷ್ಣ ಬಿ, ಹನ್ ಮಂತು, ರಂಗನಾಥ್, ಲೋಕಿ ಬಾಯ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಮೇಶ್ ಕೃಷ್ಣ ಸಂಗೀತ ನಿರ್ದೇಶನ, ಶಂಕರ್ ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನ ಚಿತ್ರಕ್ಕಿದೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಶುರುವಾಗಲಿದ್ದು ಡಿಸೆಂಬರ್ ಹೊತ್ತಿಗೆ ಚಿತ್ರ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ.