- ಮೇ 23ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ “ಗಂಟ್ ಕಲ್ವೆರ್”
- ಸುಧಾಕರ್ ಬನ್ನಂಜೆ ನಿರ್ದೇಶನದಲ್ಲಿ ಮೂಡಿಬಂದಿದೆ ತುಳು ಚಿತ್ರ
- ತುಳು ಭಾಷೆಯ ಪ್ರತಿಭಾವಂತ ನಟರ ಸಮಾಗಮವೇ ಇಲ್ಲಿದೆ.
ಸ್ನೇಹಕೃಪಾ Snehakripa ಲಾಂಛನದಲ್ಲಿ ಉಪ್ಪಳ ರಾಜಾರಾಮ್ ಶೆಟ್ಟಿ Uppala Rajaram Shetty ಅರ್ಪಿಸುತ್ತಿರುವ, ಗಿರೀಶ್ ಪೂಜಾರಿ Girish Poojary ಸಹಕಾರದೊಂದಿಗೆ, ಸುಧಾಕರ ಬನ್ನಂಜೆ Sudhakara Bannanje ನಿರ್ಮಿಸಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ತುಳು ಚಿತ್ರ “ಗಂಟ್ ಕಲ್ವೆರ್” Gant Kalver ಮೇ 23 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತುಳು ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ವಿ. ಮನೋಹರ್ V Manohar ಸಂಗೀತವಿದ್ದು, ಲಕ್ಷ್ಮಣ ಕಲಾನಿರ್ದೇಶನ, ಕೆ.ಗಿರೀಶ್ ಕುಮಾರ್ ಸಂಕಲನ, ಶಂಕರ್ ರವಿ ಕಿಶೋರ್ ಛಾಯಾಗ್ರಹಣ, ಪ್ರಶಾಂತ್ ಎಳ್ಳಂಪಳ್ಳಿ, ರಾಮದಾಸ್ ಸಸಿಹಿತ್ಲು ಸಹ ನಿರ್ದೇಶನ ಚಿತ್ರಕ್ಕಿದೆ.
ತೆರೆ ಮೇಲೆ ತುಳುರಂಗದ ಪ್ರತಿಭಾವಂತರು
ನವೀನ್ ಪಡೀಲ್, ಅರವಿಂದ ಬೋಳಾರ್, ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ, ಭೋಜರಾಜ್ ವಾಮಂಜೂರ್, ಸುಧೀರ್ ಕೊಠಾರಿ, ಉಮೇಶ್ ಮಿಜಾರು, ಸುಂದರ ರೈ ಮಂದಾರ, ರಾಕೇಶ್ ಆಚಾರ್ಯ, ನಾಗೇಶ್ ಡಿ ಶೆಟ್ಟಿ, ಸಂಚಿತ, ಮೈತ್ರಿ, ದಿಶಾ ಮುಂತಾದ ಇನ್ನೂ ಹಲವು ಪ್ರತಿಭಾವಂತರ ಅಭಿನಯ ಚಿತ್ರಕ್ಕಿದೆ. ಅಲ್ಲದೇ ಅಥರ್ವ ಪ್ರಕಾಶ್, ಶ್ರೀಕಾಂತ್ ರೈ, ಪ್ರಣವ್ ಹೆಗ್ಡೆ, ಶೈಲೇಶ್ ಕೋಟ್ಯಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.