- ಸದ್ಯದಲ್ಲೇ ಬಿಡುಗಡೆಯಾಗಲಿದೆ “ಗತವೈಭವ”
- ಸಿಂಪಲ್ ಸುನಿ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿದೆ ಚಿತ್ರ
- ದುಷ್ಯಂತ್, ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ “ಗತವೈಭವ”
ಸಿಂಪಲ್ ಸುನಿ Simple Suni ಭತ್ತಳಿಕೆಯಿಂದ ಬರುತ್ತಿರುವ ಬಹುನಿರೀಕ್ಷಿತ ಚಿತ್ರ “ಗತವೈಭವ” Gathavaibhava ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಭರದಿಂದ ಸಾಗಿವೆ. ಆದಷ್ಟು ಶೀಘ್ರದಲ್ಲಿ ಚಿತ್ರ ತೆರೆಯ ಮೇಲೆ, ಸಿನಿಪ್ರೇಕ್ಷಕರೆದುರು ತೆರೆದಿಡಬೇಕೆಂಬ ಪ್ರಯತ್ನ ಸಿನಿಮಾ ತಂಡದ್ದು. ಸದಾ ಹೊಸ ರೀತಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಬೇಕೆಂಬ ತುಡಿತ ಹೊಂದಿರುವ ನಿರ್ದೇಶಕ ಸಿಂಪಲ್ ಸುನಿ, ಕಾಮಿಡಿ, ಸೀರಿಯಸ್, ಹಾರರ್, ಫ್ಯಾಂಟಸಿ ಮಂತಾದ ಪ್ರಕಾರಗಳ ಸಿನಿಮಾವನ್ನು ಮಾಡಿದ್ದಾರೆ. ಈಗ ಅವರು ಈ ಸಿನಿಮಾ ಮೂಲಕ ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ತೆರೆಗೆ ತರುತ್ತಿದ್ದಾರೆ.
ಈ ಚಿತ್ರದ ಮೂಲಕ ಯುವ ಪ್ರತಿಭೆ ದುಷ್ಯಂತ್ Dushyanth ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರಿಗೆ ಸಾಥ್ ನೀಡಿದ್ದಾರೆ ಆಶಿಕಾ ರಂಗನಾಥ್ Ashika Ranganath. ಸುನಿ ಸಿನಿಮಾಸ್ Suni Cinemas ಸಂಸ್ಥೆ ಹಾಗೂ ಮಾತಾ ಮೂವಿ ಮೇಕರ್ಸ್ Matha Movie Makers ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ. ಕೊಡಗು, ಮಂಗಳೂರು, ಪೋರ್ಚುಗಲ್ನಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.