- 100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್ ಚಿತ್ರ “ಮಹಾವತಾರ ನರಸಿಂಹ”
- ಕನ್ನಡದ ಆ್ಯನಿಮೇಷನ್ ಸಿನಿಮಾ, ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿ ದೊಡ್ಡ ಸುದ್ದಿ ಮಾಡಿದೆ.
ಕನ್ನಡದ ಆ್ಯನಿಮೇಷನ್ ಸಿನಿಮಾ “ಮಹಾವತಾರ ನರಸಿಂಹ” Mahavathara Narasimha, ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿ ದೊಡ್ಡ ಸುದ್ದಿ ಮಾಡಿದೆ. ಈ ಚಿತ್ರದ ಗಳಿಕೆ 105 ಕೋಟಿ ರೂ ಗಳಿಗೆ ಏರಿಕೆಯಾಗಿದೆ ಎನ್ನುವ ಮಾಹಿತಿ ಲಭಿಸಿದೆ. “ಮಹಾವತಾರ ನರಸಿಂಹ” ಚಿತ್ರ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಬಿಡುಗಡೆ ಬಳಿಕ ಚಿತ್ರ ಗಳಿಕೆಯಲ್ಲಿ ಭಾರೀ ದಾಖಲೆ ಬರೆದಿದೆ. ಈಗಾಗಲೇ ಕನ್ನಡಲ್ಲೂ ಅತ್ಯಧಿಕ ಗಳಿಕೆ ಮಾಡುತ್ತಿರುವ ಈ ಸಿನಿಮಾ, ಹಿಂದಿಯಲ್ಲಿ ನೂರು ಕೋಟಿ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದೆ ಆ ಮೂಲಕ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ಬರೆದಿದೆ. ಇದೊಂದು ಪೌರಾಣಿಕ ಕಥಾ ಆಧಾರಿತ ಚಿತ್ರವಾಗಿದ್ದು ನರಸಿಂಹನ ವಿವಿಧ ಅವತಾರಗಳೇ ಚಿತ್ರದ ಹೈಲೈಟ್. 100 ಕೋಟಿ ದಾಖಲೆ ಬರೆದ ಭಾರತದ ಮೊಟ್ಟಮೊದಲ ಸಿನಿಮಾ “ಮಹಾವತಾರ ನರಸಿಂಹ” ಎನ್ನುವುದು ಮತ್ತೊಂದು ಹೆಗ್ಗಳಿಕೆಯಾಗಿದೆ.
ಸ್ಟಾರ್ ಕಲಾವಿರಿಲ್ಲದೆಯೂ ಯಶಸ್ಸು
ಯಾವುದೇ ಸ್ಟಾರ್ ಕಲಾವಿದರು ಮತ್ತು ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಗಳಿಸಿರುವುದು ಭಾರತೀಯ ಚಿತ್ರರಂಗದ ಪಾಸಿಟಿವ್ ಬೆಳವಣಿಗೆ.
ಅಶ್ವಿನ್ ಕುಮಾರ್ Ashwin Kumar ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ Hombale Films ಪ್ರಸ್ತುತಪಡಿಸಿದ, ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಿಸಿದ ಈ ಚಿತ್ರ ಬಿಡುಗಡೆಗೊಂಡು ಇಂದಿಗೆ 10 ದಿನಗಳನ್ನು ಪೂರೈಸಿದೆ. ಬರೀ ಹತ್ತು ದಿನಗಳಲ್ಲೇ ಚಿತ್ರ ಈ ಮಟ್ಟದಲ್ಲಿ ಸಂಚಲನ ಉಂಟು ಮಾಡಿರುವುದಕ್ಕೆ ಚಿತ್ರತಂಡ ಫುಲ್ ಖುಷಿಯಲ್ಲಿದೆ.