ಇಂಟರೆಸ್ಟಿಂಗ್ ಆಗಿದೆ “ಇಂಟರ್ವಲ್” ಟ್ರೈಲರ್

Date:

  • ಇಂಟರೆಸ್ಟಿಂಗ್ ಆಗಿದೆ “ಇಂಟರ್ವಲ್” ಟ್ರೈಲರ್
  • ಮೂವರು ಯುವಕರು ಹಾಗೂ ಇಬ್ಬರು ಯುವತಿಯರ ನಡುವಿನ ಕತೆ “ಇಂಟರ್ವಲ್”
  • ಇತ್ತೀಚೆಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರಿಂದ ರಿಲೀಸ್ ಆಯ್ತು ಚಿತ್ರದ ಹಾಡು ಹಾಗೂ ಟ್ರೈಲರ್

ಭರತವಷ್೯ ಪಿಚ್ಚರ್ಸ್ ಮೂಲಕ ಭರತವರ್ಷ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಹರೆಯದ ಯುವಕ ಯುವತಿಯರ ಹುಡುಗಾಟ, ತುಂಟಾಟಗಳ ಕತೆಯೇ “ಇಂಟರ್ವಲ್” ಸಿನಿಮಾದ Interval Cinema ಕಥಾಹಂದರ. ಮಾರ್ಚ್ 7ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಹಾಡು ಹಾಗೂ ಟ್ರೈಲರ್ ಇತ್ತಿಚೆಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರಿಂದ ರಿಲೀಸ್ ಆಯ್ತು. ಟ್ರೈಲರ್ ಬಿಡುಗಡೆಗೊಳಿಸಿದ ಶ್ರೀ ಮುರಳೀ “ಇಂಟರ್ ವೆಲ್ ಹೆಸರೇ ಒಂಥರಾ ಇಂಟರೆಸ್ಟಿಂಗ್ ಆಗಿದೆ. ಇದರ ಹಾಡು, ಟ್ರೈಲರ್ ನಿಜಕ್ಕೂ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ಈಗಿನ ಕಾಲದ ಯಂಗ್ ಸ್ಟರ್ಸ್ಗೆ ಏನು ಬೇಕೋ ಅದೆಲ್ಲವನ್ನೂ ನಿರ್ದೇಶಕರು ಚೆನ್ಬಾಗಿ ತೆರೆಮೇಲೆ ಮೂಡಿಸಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೀಗಿದೆ ಇಂಟರ್ವಲ್

ನಿರ್ದೇಶಕ ಭರತ್ ರವರ ಮಾತುಗಳಲ್ಲಿ ಚಿತ್ರದ ಕಥೆ ಕೇಳುವುದಾದರೆ “ಈಗಿನ ಕಾಲದ ಯೂಥ್ ಬೇಸ್ ಮಾಡಿಕೊಂಡು ಹೆಣೆದ ಕಥೆ. ಇಡೀ ಚಿತ್ರ ಯೂಥ್ ಫುಲ್ ಆಗಿದೆ. ಪ್ರತಿಯೊಬ್ಬರ ಲೈಫ್ ನಲ್ಲಿ ಇಂಟರ್ವೆಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಲೈಫ್ ನಲ್ಲಿ ಆದ ಇಂಟರ್ ವೆಲ್ ಏನೇನೆಲ್ಲ ಮಾಡಿತು ಅನ್ನೋದೇ ಈ ಚಿತ್ರದ ಕಥಾಹಂದರ. ವಿಶೇಷವಾಗಿ ಚಿತ್ರದ ಕ್ಕೈಮ್ಯಾಕ್ಸ್ ಅದ್ಭುತವಾಗಿದೆ. ಅದಲ್ಲೂ ಕೊನೇ ಹತ್ತು ನಿಮಿಷ ಗಮನ ಸೆಳೆಯುತ್ತದೆ. ಅದನ್ನು ರೈನ್ ಎಫೆಕ್ಟ್ ನಲ್ಲಿ ಮಾಡಿದ್ದೇವೆ” ಅಂತ ಚಿತ್ರದ ಕುರಿತು ಇನ್ನಷ್ಟು ಕುತೂಹಲ ಮೂಡಿಸುತ್ತಾರೆ.

ಹೊಸಬರ ಉತ್ಸಾಹಿ ಚಿತ್ರತಂಡ

ಹೊಸಬರೇ ಹೆಚ್ಚಿರುವ ಈ ಚಿತ್ರತಂಡದಲ್ಲಿ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಸುಕೇಶ್ ಅವರದು. ಛಾಯಾಗ್ರಹಣ ರಾಜ್ ಕಾಂತ್. ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ. ಶಶಿಧರ್ ರವರ ಸಂಕಲನ ಚಿತ್ರಕ್ಕಿದೆ. ಶಿವಮೊಗ್ಗ, ತೀರ್ಥಹಳ್ಳಿ,ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ

ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ‌ ಮಣ್ಣಿನ ಸೊಗಡಿನ ಕಥೆ ಇನ್ನೂ...

ಟ್ರೆಂಡಿಂಗ್ ಆಗ್ತಿದೆ “ಜಾಂಟಿ ಸನ್ ಆಫ್ ಜಯರಾಜ್” ಚಿತ್ರದ “ಕ್ಷಮಿಸು ತಾಯೇ” ಹಾಡು

ಟ್ರೆಂಡಿಂಗ್ ಆಗ್ತಿದೆ “ಜಾಂಟಿ ಸನ್ ಆಫ್ ಜಯರಾಜ್" ಚಿತ್ರದ “ಕ್ಷಮಿಸು ತಾಯೇ"...

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ”

ಏ. 11 ಕ್ಕೆ ತೆರೆಗೆ ಬರಲಿದೆ ಮಹಿಳಾ ಪ್ರಧಾನ ಚಿತ್ರ “ಮೀರಾ” ತುಳು...

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್”

ಮುಗ್ಧ ಪ್ರೀತಿಯನ್ನು ಕಾಡಿಸುವ “ಪೆಟಲ್ಸ್" ಶರತ್ ರಾಯ್ಸದ್ ನಿರ್ದೇಶನದಲ್ಲಿ ಮೂಡಿಬಂದಿದೆ ಅದ್ಭುತ ಕಿರುಚಿತ್ರ ನೋಡುಗರನ್ನು...