- ಹೆಸರಿನಿಂದ ಕುತೂಹಲ ಹುಟ್ಟಿಸುತ್ತಿರುವ “ಜಾವಾ ಕಾಫಿ” ಸದ್ಯದಲ್ಲೇ ತೆರೆಗೆ
- ತೆರೆಗೆ ಬರಲು ಸಿದ್ದವಾಗಿದೆ ಕೇರಳ ಮೂಲದ ಸಾನ್ವಿಕ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ಚಿತ್ರ
- ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಶೈನಿಂಗ್ ಸ್ಟಾರ್ ಅಜಯ್ ವರ್ಧನ್ ನಾಯಕರಾಗಿದ್ದಾರೆ
ಹದಿನೈದು ವರ್ಷಗಳ ಕನಸನ್ನು ನನಸು ಮಾಡಲು ಕೇರಳ ಮೂಲದರಾದರೂ ಮೊದಲ ಚಿತ್ರ “ಜಾವಾ ಕಾಫಿ” Java Coffee ಯನ್ನು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ ಸಾನ್ವಿಕ Sanvika. ನಿರ್ದೇಶಕಿ, ನಿರ್ಮಾಪಕಿ, ನಾಯಕಿ, ಕಥೆ, ಚಿತ್ರಕಥೆ, ಸಾಹಸ ನಿರ್ದೇಶನ ಸೇರಿದಂತೆ ಈ ಚಿತ್ರದ ಒಂಭತ್ತು ಆಯಾಮಗಳಲ್ಲಿ ಕೆಲಸ ಮಾಡಿರುವ ಇವರಿಗೆ ಅಸೋಸಿಯೇಟ್ ಡೈರೆಕ್ಟರ್ ವಸಂತ್ ಕೈಜೋಡಿಸಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಬೆಂಗಳೂರು, ಮಂಗಳೂರು, ಕೇರಳ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ಸೆನ್ಸಾರ್ ಮಂಡಳಿಯಿಂದ ಪಾಸಾಗಿ ಬರಬೇಕಿದೆ ಚಿತ್ರ. ಅನಂತರ ಬಿಡುಗಡೆ ದಿನಾಂಕದ ಕುರಿತು ಯೋಚಿಸುವ ತಯಾರಿಯಲ್ಲಿದೆ ಚಿತ್ರತಂಡ. ಮೊದಲು ಕನ್ನಡದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಇದ್ದು, ಆನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಮಾಡುವ ಆಲೋಚನೆ ತಂಡಕ್ಕಿದೆ.
ಈಗಾಗಲೇ ತುಳು ಚಿತ್ರದಲ್ಲಿ ನಟಿಸಿ ಅನುಭವವಿರುವ ಈ ಚಿತ್ರದ ನಾಯಕ ಶೈನಿಂಗ್ ಸ್ಟಾರ್ ಅಜಯ್ ವರ್ಧನ್ Shining Star Ajay Vardhan ಅವರಿಗೆ ಇದು ಮೂರನೇ ಚಿತ್ರ. ಈ ಚಿತ್ರದಲ್ಲಿ ಅವರದು ಪತ್ರಕರ್ತನ ಪಾತ್ರವಂತೆ. ಇನ್ನುಳಿದಂತೆ ಚಿತ್ರದಲ್ಲಿ ಮಂಜುನಾಥ್, ಪ್ರತಿಮ, ಭವಾನಿ ಶಂಕರ್, ವಿಜಯ್ ಕುಮಾರ್, ರಾಮಚಂದ್ರ, ರಾಮಲಿಂಗಪ್ಪ ಮುಂತಾದವರ ನಟನೆಯಿದೆ. ಹಿನ್ನೆಲೆ ಸಂಗೀತ ಧ್ರುವ ದೇವರಾಯನ್, ನೃತ್ಯ ನಿರ್ದೇಶನ ಪಾಲಾಶ್ ಮಾಸ್ಟರ್ ಅವರದ್ದು. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್ ಕರ್ಕೇರ ಸಂಗೀತ ನೀಡಿದ್ದಾರೆ.