- ನೈಜ ಘಟನೆಗಳನ್ನಾಧರಿಸಿದ ಚಿತ್ರ “ಜಂಗಲ್ ಮಂಗಲ್” ಜುಲೈ 4 ಕ್ಕೆ ತೆರೆಗೆ
- ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿರುವ ಚಿತ್ರ.
- “ಜಂಗಲ್ ಮಂಗಲ್” ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಪುಲ್ ಟ್ರೆಂಡಿಂಗ್ ನಲ್ಲಿದೆ.
ಸಹ್ಯಾದ್ರಿ ಸ್ಟುಡಿಯೋಸ್ Sahyadri Studios ಮೂಲಕ ನಿರ್ಮಾಣವಾಗಿರುವ , ಸಿಂಪಲ್ ಸುನಿ Simple Suni ಬ್ಯಾನರ್ನಡಿ ಅರ್ಪಿಸಲ್ಪಡುತ್ತಿರುವ “ಜಂಗಲ್ ಮಂಗಲ್” Jungle Mangal ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ರಕ್ಷಿತ್ ಕುಮಾರ್ Rakshith Kumar. ನಿರ್ದೇಶನದೊಂದಿಗೆ ಪ್ರಜೀತ್ ಹೆಗಡೆ, ಮನು ಶೇಡ್ಗಾರ್ ಮುಂತಾದ ಕೆಲವು ಸ್ನೇಹಿತರೆ ಸೇರಿ ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ. ಈ ಸಿನಿಮಾಗೆ ಯೋಗರಾಜ್ ಭಟ್ Yogaraj Bhat ಶೀರ್ಷಿಕೆ ಕೊಟ್ಟಿದ್ದು, ಜುಲೈ 4 ಕ್ಕೆ ತೆರೆಗೆ ಬರಲಿದೆ ಚಿತ್ರ. ಇದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆಯಾಗಿದ್ದರೂ, ಯೂನಿವರ್ಸಲ್ ಸಬ್ಜೆಕ್ಟ್ ಎನ್ನಬಹುದು ಎನ್ನುತ್ತಾರೆ ನಿರ್ದೇಶಕರು.
ಕುತೂಹಲಕ್ಕೆ ಕಾರಣವಾಗಿದೆ ಟ್ರೇಲರ್
ಟ್ರೇಲರ್ನಲ್ಲಿ ಬರುವ ”ಹಿಂದೆಯೂ ನಡೆದ, ಇಂದೂ ನಡೆಯುತ್ತಿರುವ, ಗಂಡು ಹೆಣ್ಣು, ಪಕೃತಿ ಇರುವವರೆಗೆ, ಮುಂದೆಯೂ ನಡೆಯಬಹುದಾದ ನೈಜ ಘಟನೆಗಳ ಮೇಲೆ ಆಧಾರಿತ” ಎಂಬ ಸಾಲು ಕಥೆ ಸುತ್ತಲಿನ ಕುತೂಹಲ ಹೆಚ್ಚಿಸಿದೆ. ಯಶ್ ಶೆಟ್ಟಿ Yash Shetty ನಾಯಕನಾಗಿ, ಹರ್ಷಿತ ರಾಮಚಂದ್ರ Harshitha Ramachandra ನಾಯಕಿಯಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ಉಗ್ರಂ ಮಂಜು, ಬಲ ರಾಜವಾಡಿ ಸೇರಿ ಮೊದಲಾದವರು ಅಭಿನಯಿಸಿದ್ದಾರೆ. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಚಿತ್ರದ ವಿತರಣೆಗೆ ಸಹಾಯ ಮಾಡುತ್ತಿದ್ದಾರೆ. ಒಂದಷ್ಟು ನೈಜ ಕಾಳಜಿಯೊಂದಿಗೆ ಹೊಸಬರ ತಂಡದಿಂದ ಹೊರಬರುತ್ತಿರುವ ಚಿತ್ರವನ್ನು ಪ್ರೇಕ್ಷಕ ದೊರೆಗಳು ಬಾಕ್ಸಾಫೀಸ್ ನಲ್ಲಿ ಗೆಲ್ಲಿಸಲಿದ್ದಾರಾ ನೋಡಬೇಕು.