- ಪಂಚಭಾಷೆಗಳಲ್ಲಿ ಬೆಳ್ಳಿತೆರೆಯ ಮೇಲೆ ಬರ್ತಿದೆ “ಜ್ಯೂನಿಯರ್”
- ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ
- ಐದು ಭಾಷೆಗಳಲ್ಲಿ ಜುಲೈ 18ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಚಿತ್ರ
ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ Radhakrishna Reddy ನಿರ್ದೇಶನದಲ್ಲಿ “ಜೂನಿಯರ್” ಸಿನಿಮಾ ತಯಾರಾಗಿದ್ದು, ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮ್ಸ್ Varahi Films ಚಿತ್ರಕ್ಕೆ ಬಂಡವಾಳ ಹೂಡಿದೆ. ಬಿಗ್ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು, ಬಹುದೊಡ್ಡ ತಾರಾಗಣ ಈ ಸಿನಿಮಾದ ಹೈಲೈಟ್. ಈ ಚಿತ್ರದ ಮೂಲಕ ಜನಾರ್ದನ ರೆಡ್ಡಿ ಪುತ್ರ ಕಿರೀಟಿ Kireeti ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಚೊಚ್ಚಲ ಚಿತ್ರವೇ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ. ಇವರಿಗೆ ಸಾಥ್ ನೀಡಿದ್ದಾರೆ ನಟಿ ಶ್ರೀಲೀಲಾ Shreeleela. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಜುಲೈ 18ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಶ್ರೀಮಂತವಾಗಿದೆ ಪಾತ್ರವರ್ಗ, ತಾಂತ್ರಿಕ ವರ್ಗ
ಕ್ರೇಜಿಸ್ಟಾರ್ ರವಿಚಂದ್ರನ್ Raichandran, ಜೆನಿಲಿಯಾ ರಿತೇಶ್ ದೇಶ್ಮುಖ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ಕನ್ನಡ ಚಿತ್ರರಂಗದ ಇನ್ನೂ ಕೆಲವು ಸ್ಟಾರ್ ನಟ, ನಟಿಯರು ಈ ಸಿನಿಮಾದಲ್ಲಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ, ರಾಕ್ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದರೆ, ಬಾಹುಬಲಿ ಸಿನಿಮಾ ಖ್ಯಾತಿಯ ಸೆಂಥಿಲ್ ಕುಮಾರ್ ಅವರ ಕ್ಯಾಮರಾ ಕೈಚಳಕವಿದೆ. ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಅವರ ಸಾಹಸ ಈ ಚಿತ್ರಕ್ಕಿದೆ. ಇದೇ ತಿಂಗಳ 19ಕ್ಕೆ ಮೊದಲ ಹಾಡು ರಿಲೀಸ್ ಆಗಲಿದ್ದು, ಅನಂತರದಲ್ಲಿ ಚಿತ್ರದ ಪ್ರಮೋಷನ್ ಕಾರ್ಯ ಕೈಗೆತ್ತಿಕೊಳ್ಳುವ ಪ್ಲಾನ್ ಚಿತ್ರತಂಡಕ್ಕಿದೆ.