- ಮಾರ್ಚ್ 7 ರಂದು ಕನಸೊಂದು ಶುರುವಾಗಲಿದೆ…
- ನಿರ್ದೇಶಕ ಮಂಜೇಶ್ ಆಕ್ಷನ್ ಕಟ್ ಹೇಳಿರುವ ಚಿತ್ರ “ಕನಸೊಂದು ಶುರುವಾಗಿದೆ”.
- ಮಾರ್ಚ್ 7 ರಂದು ತೆರೆ ಕಾಣಲಿದೆ ಸಂತೋಷ್ ಬಿಲ್ಲವ ನಾಯಕತ್ವದ ಈ ಸಿನಿಮಾ
ಕೆಕೆಆರ್ ಬ್ಯಾನರ್ ಅಡಿಯಲ್ಲಿ ಲಕ್ಷ್ಮೀಕಾಂತ್ ರೆಡ್ಡಿ ನಿರ್ಮಿಸುತ್ತಿರುವ ಸಿನಿಮಾ ” ಕನಸೊಂದು ಶುರುವಾಗಿದೆ” Kanasondu Shuruvagide Movie ತೆರೆಗೆ ಬರಲು ಸಿದ್ಧವಾಗಿದ್ದು, ಇದರ ಟ್ರೇಲರ್ ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಹಾಗೂ ಲೂಸ್ ಮಾದ ಇವರಿಂದ ಬಿಡುಗಡೆಗೊಂಡಿದೆ. ಸಹಾರಾ ಸಿನಿಮಾ ನಿರ್ದೇಶನದ ಮೂಲಕ ಬೆಳ್ಳೆತೆರೆಗೆ ಹೆಜ್ಜೆ ಇಟ್ಟಿದ್ದ ನಿರ್ದೇಶಕ ಮಂಜೇಶ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ.
ನಾಯಕ ಸಂತೋಷ್ ಬಿಲ್ಲವ ಅವರಿಗಿದು ಚೊಚ್ಚಲ ಚಿತ್ರವಾಗಿದ್ದು, ಅವರಿಗೆ ಜೋಡಿಯಾಗಿ ಸಾತ್ವಿಕಾ ನಟಿಸಿದ್ದಾರೆ. ಥ್ರಿಲ್ಲರ್ ಮಂಜು, ಕುರಿ ಸುನಿಲ್, ರಶ್ಮಿ, ರಾಜು ಕಾಲ್ಕುಣಿ, ಕೃಷ್ಣಮೂರ್ತಿ ಕನಕಪುರ, ನಾಗರತ್ನ ಭಟ್ ಮುಂತಾದವರು ತಾರಾಗಣದಲ್ಲಿದ್ದಾರೆ. ಲೋಕೇಂದ್ರ ಸೂರ್ಯ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ, ದೀಪಕ್ ಗೌಡ ಸಂಕಲನವಿದೆ. ಮಾರ್ಚ್ 7 ರಂದು ಕನಸೊಂದರ ಪಯಣ ಶುರುವಾಗಲಿದೆ.