- ಸೆಟ್ಟೇರಲಿದೆ ಕನ್ನಡ, ತುಳು ಸಿನಿಮಾ “ಕತೆ ಕೈಲಾಸ”
- ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆಯಿತು ಮುಹೂರ್ತ ಸಮಾರಂಭ.
- ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಕ್ಲಾಪ್ ಮಾಡಿ, ಶುಭಹಾರೈಸಿದರು.
ಸೂರಜ್ ಶೆಟ್ಟಿ ಕಥೆ ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡುತ್ತಿರುವ, ಲಕುಮಿ ಸಿನಿ ಕ್ರಿಯೇಷನ್ಸ್ ವತಿಯಿಂದ, ಶ್ರೀ ಕದಳಿ ಸಿನಿ ಪ್ರೊಡಕ್ಷನ್ ನಿರ್ಮಾಣದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಮೂಡಿಬರುವ ಚಿತ್ರ “ಕತೆ ಕೈಲಾಸ” Kathe Kailasa ಮುಹೂರ್ತ ಇತ್ತೀಚೆಗೆ ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆಯಿತು. ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಕ್ಲಾಪ್ ಮಾಡಿ, ಶುಭಹಾರೈಸಿದರು.

ಕಾಮಿಡಿ ಜಾನರ್ ಮೂವೀ “ಕತೆ ಕೈಲಾಸ”
ಮಂಗಳೂರು ಸುತ್ತಮುತ್ತಲಿನಲ್ಲಿ ಮೂವತ್ತು ದಿನಗಳ ಒಳಗೆ ಚಿತ್ರೀಕರಣ ಮುಗಿಸುವ ಯೋಚನೆಯಲ್ಲಿದೆ ಚಿತ್ರತಂಡ. ಇದು ಕಾಮಿಡಿ ಜಾನರ್ ನ ಕತೆಯನ್ನು ಕಥಾಹಂದರವನ್ನಾಗಿ ಒಳಗೊಂಡಿದ್ದು, ತಾರಾಗಣದಲ್ಲಿ ವಿಸ್ಮಯ ವಿನಾಯಕ, ಮೈಮ್ ರಾಮದಾಸದ, ಪುಷ್ಪರಾಜ್ ಬೊಳ್ಳೂರು, ಗಣೇಶ್ ಆಚಾರ್ಯ, ರಾಘವ ಸೂರಿ, ವಿನೋದ್ ಶೆಟ್ಟಿ, ನವ್ಯಾ ಪೂಜಾರಿ, ದಿವಾಕರ ಕಟೀಲು, ವಾಲ್ಟರ್ ನಂದಳಿಕೆ, ಕದ್ರಿ ನವನೀತ್ ಶೆಟ್ಟಿ, ಮೋಹನ ಕೊಪ್ಪಲ, ಪ್ರದೀಪ್ ಆಳ್ವ ಮುಂತಾದವರು ತಾರಾಗಣದಲ್ಲಿದ್ದಾರೆ. ನವೀನ್ ಶಂಕರ್ ಅವರ ಸಂಗೀತವಿದ್ದು, ಜಾಯಲ್ ಸಮನ್ ಡಿಸೋಜ ಕ್ಯಾಮೆರಾ, ಪ್ರದೀಪ್ ರಾವ್ ಸಂಕಲನವಿದೆ.
ಕಿಶೋರ್ ಡಿ ಶೆಟ್ಟಿ, ಪುರುಷೋತ್ತಮ ಭಂಡಾರಿ, ಮೋಹನ ಕೊಪ್ಪಲ, ಪ್ರದೀಪ್ ಆಳ್ವ, ದಿವಾಕರ್ ಶೆಟ್ಟಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.