ಟಿಆರ್ಪಿ ವರದಿ: ಕರ್ಣ ಮತ್ತೆ ನಂಬರ್ ಒನ್, ಅಮೃತಧಾರೆ ಗೆ 2 ನೇ ಸ್ಥಾನ

Date:

  • ಟಿಆರ್ಪಿ ವರದಿ: ಕರ್ಣ ಮತ್ತೆ ನಂಬರ್ ಒನ್, ಅಮೃತಧಾರೆ ಗೆ 2 ನೇ ಸ್ಥಾನ
  • ಹೆಚ್ಚುತ್ತಲೇ ಇದೆ ಸೀರಿಯಲ್-ರಿಯಾಲಿಟಿ ಶೋ ಕ್ರೇಝ್
  • ಟಿ ಆರ್ ಪಿ ಓಟದಲ್ಲಿ ಗಮನಸೆಳೆದ ಕಾರ್ಯಕ್ರಮಗಳಿವು!

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಯಶಸ್ಸು ವಾರ ವಾರವೂ ಜಾಸ್ತಿಯಾಗುತ್ತಲೇ ಇದೆ. ಪ್ರೇಕ್ಷಕರ ಮನಗೆಲ್ಲಲು ನಿರ್ದೇಶಕರು ಹೊಸ ಕಥಾ ತಿರುವುಗಳನ್ನು, ಭಾವನಾತ್ಮಕ ಸನ್ನಿವೇಶಗಳನ್ನು ಮತ್ತು ಕುತೂಹಲ ಮೂಡಿಸುವ ದೃಶ್ಯಗಳನ್ನು ಸೇರಿಸುತ್ತಲೇ ಇದ್ದಾರೆ. ಆದರೆ ಯಾವ ಸೀರಿಯಲ್ ಪ್ರೇಕ್ಷಕರನ್ನು ರಂಜಿಸುತ್ತಿದೆ? ಯಾವುದು ಪ್ರೇಕ್ಷಕರಿಗೆ ಖುಷಿ ನೀಡುತ್ತಿಲ್ಲ? ಎನ್ನುವುದನ್ನು ಟಿಆರ್ಪಿ ಅಂಕಿ ಅಂಶಗಳು ತಿಳಿಸುತ್ತವೆ. ಇದೀಗ 42ನೇ ವಾರದ ಟಿಆರ್ಪಿ ಲಿಸ್ಟ್ TRP list ಬಹಿರಂಗವಾಗಿದೆ ಮತ್ತು ಈ ಬಾರಿ ಪಟ್ಟಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ.

ಟಾಪ್ಗೆ ಮರಳಿದ “ಕರ್ಣ”

ಕಳೆದ ಕೆಲವು ವಾರಗಳಿಂದ ಟಾಪ್ ಸ್ಥಾನದಲ್ಲಿದ್ದ ಝೀ ಕನ್ನಡದ Zee Kannada ಅಮೃತಧಾರೆ Amruthadhare ಈ ಬಾರಿ ತನ್ನ ಸ್ಥಾನ ತಪ್ಪಿಸಿಕೊಂಡಿದೆ. ಕಥೆಯಲ್ಲಿ ನಗುವಿನ ಮನರಂಜನೆ ಹೆಚ್ಚಿಸಿ ಗಮನ ಸೆಳೆದಿದ್ದರೂ, ಈ ವಾರ ಸೀರಿಯಲ್ ಸ್ವಲ್ಪ ಕುಸಿತ ಕಂಡಿದೆ. ಆದರೆ ಭಾವನಾತ್ಮಕ ಕಥೆ ಮತ್ತು ಗಟ್ಟಿ ಅಭಿನಯದ ಮೂಲಕ ಪ್ರೇಕ್ಷಕರನ್ನು ಮತ್ತೆ ಸೆಳೆದ “ಕರ್ಣ” Karna ಧಾರಾವಾಹಿ 10.1 ಟಿವಿಆರ್ ಪಡೆದು ಮತ್ತೆ ನಂಬರ್ ಒನ್ ಸ್ಥಾನಕ್ಕೆ ಏರಿದೆ.

ಮೂರನೇ ಸ್ಥಾನಕ್ಕೆ “ಅಣ್ಣಯ್ಯ”

ಝೀ ಕನ್ನಡದ “ಅಣ್ಣಯ್ಯ” Annayya ಧಾರಾವಾಹಿ ಈ ವಾರವೂ ತನ್ನ ಮೂರನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಈ ಸೀರಿಯಲ್ ನ ಭಾವುಕ ಸಂಘರ್ಷಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈ ಧಾರಾವಾಹಿ ಮುಂದಿನ ವಾರ ಮತ್ತಷ್ಟು ರೇಟಿಂಗ್ ಗಳಿಸುವ ನಿರೀಕ್ಷೆಯೂ ಇದೆ.

“ನಂದಗೋಕುಲ” ಮುಂಚೂಣಿ


ಕಲರ್ಸ್ ಕನ್ನಡ ವಾಹಿನಿಯ ಟಿಆರ್ಪಿ ಪಟ್ಟಿಯಲ್ಲಿ ನಂದಗೋಕುಲ ಮೊದಲ ಸ್ಥಾನವನ್ನು ಪಡೆದಿದೆ. ಕುಟುಂಬದ ಬಂಧ ಮತ್ತು ಗ್ರಾಮೀಣ ಹಿನ್ನೆಲೆಯ ಈ ಸೀರಿಯಲ್ ಕಥೆ ಪ್ರೇಕ್ಷಕರಿಗೆ ನಿಜಕ್ಕೂ ಹತ್ತಿರವಾಗಿದೆ.

ಬಿಗ್ ಬಾಸ್ ಕನ್ನಡ 12 ಪ್ರದರ್ಶನ

ರಿಯಾಲಿಟಿ ಕಾರ್ಯಕ್ರಮಗಳ ವಿಭಾಗದಲ್ಲಿ ಬಿಗ್ ಬಾಸ್ ಕನ್ನಡ ತನ್ನದೇ ಆಕರ್ಷಣೆಯನ್ನು ಕಾಯ್ದುಕೊಂಡಿದೆ. ಸುದೀಪ್ ಹೋಸ್ಟಿಂಗ್ ಪ್ರೇಕ್ಷಕರನ್ನು ಸೆಳೆದಿದೆ. ಅಂತೂ ಸೀರಿಯಲ್ಸ್ ಮತ್ತು ರಿಯಾಲಿಟಿ ಶೋ ಗಳನ್ನು ವೀಕ್ಷಕರನ್ನು ಮತ್ತಷ್ಟು ಸೆಳೆಯೋದಂತೂ ಖಚಿತ

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...