- ಶೂಟಿಂಗ್ ಮಗಿಸಿದ ಕಾಂತಾರ ಚಾಪ್ಟರ್ 1 : ಮೇಕಿಂಗ್ ವಿಡಿಯೋ ನೋಡಿ ಪ್ರೇಕ್ಷಕರು ಫುಲ್ ಖುಷ್
- ಈ ವಿಡಿಯೋ ಸಿನಿಮಾದ ಅದ್ದೂರಿತನದ ಸಣ್ಣ ದರ್ಶನ ಮಾಡಿಸಿದೆ
- ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ.
ರಿಷಬ್ ಶೆಟ್ಟಿ Rishabh Shetty ಅಭಿನಯದ ಬಹುನಿರೀಕ್ಷಿತ ಚಿತ್ರ, “ಕಾಂತಾರ: ಚಾಪ್ಟರ್ 1” Kanthara Chapter 1 ಶೂಟಿಂಗ್ ನ್ನು ಯಶಸ್ವಿಯಾಗಿ ಮುಗಿಸಿದೆ. ಈ ಕುರಿತು ಹೊಂಬಾಳೆ ಫಿಲ್ಮಂ Hombale Films ತನ್ನ ಯುಟ್ಯೂಬ್ ನಲ್ಲಿ ಮೇಕಿಂಗ್ ವಿಡಿಯೋ ನ್ನು ಕೂಡ ರಿಲೀಸ್ ಮಾಡಿದ್ದು, ಈ ವಿಡಿಯೋ ಸಿನಿಮಾದ ಅದ್ದೂರಿತನದ ಸಣ್ಣ ದರ್ಶನ ಮಾಡಿಸಿದೆ. ಕಾಂತಾರ ಚಿತ್ರತಂಡ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆಸಿದೆ. ಹತ್ತಾರು ಸಾಹಸಗಳು ಈ ಸಿನಿಮಾದಲ್ಲಿ ಸೇರಿಕೊಂಡಿದೆ. ಅಬ್ಬರದ ದೃಶ್ಯಗಳು ಮೈನವಿರೇಳಿಸುವಂತಿದೆ ಎಂದು ಅದಾಗಲೇ ಪ್ರೇಕ್ಷಕರು ಸಿನಿಮಾಗೋಸ್ಕರ ಕಾಯತೊಡಗಿದ್ದಾರೆ.
ಮೇಕಿಂಗ್ ವಿಡಿಯೋನಲ್ಲಿ ಕಾಣುತ್ತಿದೆ ಚಿತ್ರತಂಡದ ಶ್ರಮ
ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ. ಬರೋಬ್ಬರಿ 3 ವರ್ಷಗಳ ಕಾಲ ನಟ ರಿಷಬ್ ಹಾಗೂ ಚಿತ್ರತಂಡ “ಕಾಂತಾರ: ಚಾಪ್ಟರ್ 1” ರ ಮೇಕಿಂಗ್ ನಲ್ಲಿ ಬ್ಯುಸಿಯಾಗಿತ್ತು, ನೂರಾರು ಸಿಬ್ಬಂದಿಗಳು ಈ ಚಿತ್ರಕ್ಕೋಸ್ಕರ ಹಗಲಿರುಳು ಶ್ರಮಿಸಿದ್ದಾರೆ. ಆ ಶ್ರಮ ಮೇಕಿಂಗ್ ವಿಡಿಯೋನಲ್ಲಿ ಕೂಡ ಕಾಣುತ್ತಿರುವುದು ವಿಶೇಷ. ಅರವಿಂದ್ ಕಶ್ಯಪ್ ಛಾಯಾಗ್ರಹಣ, ವಿನೇಶ್ ಬಂಗ್ಲನ್ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕೆ ಇದೆ. ಉಳಿದ ಪಾತ್ರವರ್ಗದ ಬಗ್ಗೆ ಅಪ್ಡೇಟ್ ನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಮೇಕಿಂಗ್ ವಿಡಿಯೋ ನೋಡಿ ರಿಷಬ್ ಶೆಟ್ಟಿ ಅಭಿಮಾನಿಗಳು ಅಕ್ಟೋಬರ್ 2ಕ್ಕಾಗಿ ತುದಿಗಾಲಲ್ಲಿ ಕಾಯುವಂತಾಗಿದೆ. ಕನ್ನಡದ ಈ ಚಿತ್ರ ವಿಶ್ವದಾದ್ಯಂತ ಸಖತ್ ಆಗಿ ಸುದ್ದಿ ಮಾಡುತ್ತಿರುವುದು ಚಿತ್ರದ ಜನಪ್ರಿಯತೆಯನ್ನು ಮತ್ತು ಕನ್ನಡತನವನ್ನು ತೋರಿಸಿಕೊಟ್ಟಿದೆ.
Kantara Chapter 1 Making Scene:



