ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ “ಕಾಂತಾರ ಚಾಪ್ಟರ್ 1” ಕುರಿತು ದಿಗ್ಗಜರು ಹೀಗೆ ಹೇಳ್ತಾರೆ

Date:

  • ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ “ಕಾಂತಾರ ಚಾಪ್ಟರ್ 1” ಕುರಿತು ದಿಗ್ಗಜರು ಹೀಗೆ ಹೇಳ್ತಾರೆ
  • ತೆರೆಗೆ ಬಂದ ಮೊದಲ ವಾರದಲ್ಲೇ ದಾಖಲೆ ಬರೀತಿದೆ ರಿಷಬ್ ಶೆಟ್ಟಿ ನೇತೃತ್ವದ ಕಾಂತಾರ
  • ಎಲ್ಲಾ ಕ್ಷೇತ್ರಗಳ ಗಣ್ಯಾತಿಗಣ್ಯರು ಸಿನಿಮಾ ನೋಡಿ ಮೆಚ್ಚುಗೆ, ಅಭಿನಂದನೆಗಳ ಮಳೆಗರೆಯುತ್ತಿದ್ದಾರೆ.

ಮೂರು ರ್ಷಗಳ ಹಿಂದೆ ತೆರೆಗೆ ಬಂದಿದ್ದ ಯಶಸ್ವಿ ಚಿತ್ರ ಕಾಂತಾರದ ಪ್ರೀಕ್ವೆಲ್ “ಕಾಂತಾರ ಚಾಪ್ಟರ್ 1” Kanthara Chapter 1 ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಕೇವಲ 6 ದಿನಗಳಲ್ಲಿ ಭಾರತದಲ್ಲಿ ಬರೋಬ್ಬರಿ 290 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಈ ಚಿತ್ರದ ಕುರಿತು ಹಲವು ದಿಗ್ಗಜರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ನಮ್ಮ ನೆಲದ ಕಥೆ, ನಮ್ಮ ನಾಡಿನ ಕಥೆ. ಇಂದು ಇಡೀ ದೇಶವೇ ಕಾಂತಾರವನ್ನು ಮೆಚ್ಚುತ್ತಿರುವುದು ಹೆಮ್ಮೆಯ ವಿಷಯ. ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಹೊಂಬಾಳೆ ಫಿಲಮ್ಸ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಅಭಿನಂದನೆಗಳು
ಶಿವರಾಜ್ ಕುಮಾರ್ Shivaraj Kumar

ರಿಷಬ್ ಶೆಟ್ಟಿ ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಓಳಿತಾಗಲಿ
ಪ್ರಕಾಶ್ ರಾಜ್ Prakash Raj

ಕಾಂತಾರ: ಚಾಪ್ಟರ್ 1 ಭಾರತೀಯ ಸಿನೆಮಾದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು. ರಿಷಬ್ ಶೆಟ್ಟಿ, ನಿಮ್ಮ ದೃಢತೆ ಮತ್ತು ಶ್ರದ್ಧೆ ಪ್ರತಿಯೊಂದು ಫ್ರೇಮ್ನಲ್ಲಿ ಗೋಚರಿಸುತ್ತಿದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ತಲ್ಲೀನಗೊಳಿಸುವ ಅನುಭವವನ್ನೇ ನೀಡಿದೆ
ಯಶ್ Yash

ಕಾಂತಾರ: ಚಾಪ್ಟರ್ 1 ನೋಡಿದ ಮೇಲೆ ನನಗೆ ತೋಚಿದ ಒಂದು ಮಾತು – ‘ಅತ್ಯದ್ಭುತ’. ರಿಷಬ್ ಶೆಟ್ಟಿ, ನೀವು ಅದ್ಭುತ ಕೆಲಸ ಮಾಡಿದ್ದೀರಿ. ಹೊಂಬಾಳೆ ಹಾಗೂ ವಿಜಯ್ ಕಿರಗಂದೂರಿಗೂ ಇದು ಹೆಮ್ಮೆ ಪಡುವಂಥ ಪ್ರಾಜೆಕ್ಟ್. ರುಕ್ಮಿಣಿ ವಸಂತ್ ಸುಂದರವಾಗಿ ಕಾಣುವುದರ ಜೊತೆಗೆ ಅಸಾಧಾರಣ ಅಭಿನಯ ನೀಡಿದ್ದಾರೆ. ಅಜನೀಶ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಮಾಯೆ ಮೆರಗು ಹೆಚ್ಚಿಸಿದೆ. ಪ್ರಗತಿ ಶೆಟ್ಟಿ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು
ರಾಧಿಕಾ ಪಂಡಿತ್ Radhika Pandith

“ಸೋಮವಾರದ್ ಮೇಲ್ ನೋಡ್ರೀ.. ಹೆಂಗ್ ಬಿದ್ದೋಗುತ್ತೆ ಅಂದೋರಿಗೆ.. ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ.. ಎಂದು ಸಾರಿ..” ಮತ್ತೆ ಇಡೀ ದೇಶವೇ ಹೆಮ್ಮೆ ಪಡುವಂತಹ ಸಿನಿಮಾ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು
ದುನಿಯಾ ವಿಜಯ್ Duniya Vijay

ಅದ್ಭುತ ಭಾರತೀಯ ಚಲನಚಿತ್ರ ವೀಕ್ಷಣೆಯ ಅನುಭವವಾಯ್ತು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ರಿಷಬ್ Rishab Shetty ಅದ್ಭುತ ವ್ಯಕ್ತಿ. ನಿಮ್ಮ ಅಭಿನಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಉನ್ನತ ದರ್ಜೆಯ vfx, ಆಕ್ಷನ್, ಅತ್ಯುತ್ತಮ ಛಾಯಾಗ್ರಹಣ, ರೋಮಾಂಚಕ BGM, ಧ್ವನಿ ವಿನ್ಯಾಸ, ನಿರ್ಮಾಣ ಎಲ್ಲವೂ ಅತ್ಯುತ್ತಮವಾಗಿದೆ. ರುಕ್ಮಿಣಿ ವಸಂತ್ ಉತ್ತಮ ನಟಿ. ಗುಲ್ಶನ್ ದೇವಯ್ಯ ದುಷ್ಟ ವ್ಯಕ್ತಿತ್ವದ ಅಭಿನಯ ಅಮಲೇರಿಸುವಷ್ಟು ಅದ್ಭುತವಾಗಿತ್ತು. ಈ ಬ್ಲಾಕ್ಬಸ್ಟರ್ ಯಶಸ್ಸಿಗೆ ಕಾರಣರಾದ ಹೊಂಬಾಳೆ ಫಿಲ್ಮ್ನವರಿಗೆ ಅಭಿನಂದನೆಗಳು.
ರಿತೇಶ್ ದೇಶಮುಖ್, ಬಾಲಿವುಡ್ ನಟ Rithesh Deshmukh

ಇದು ಈ ವರ್ಷದ ನಂಬರ್ 1 ಬ್ಲಾಕ್ಬಸ್ಟರ್ ಸಿನಿಮಾ ಆಗಲಿದೆ. ರಿಷಬ್ ಶೆಟ್ಟಿ ಅವರ ನಟನೆ ಅದ್ಭುತ. ಹೊಂಬಾಳೆ ಫಿಲಮ್ಸ್ ಹಾಗೂ ವಿಜಯ್ ಕಿರಗಂದೂರಿಗೆ ಹೃತ್ಪೂರ್ವಕ ಅಭಿನಂದನೆಗಳು
ಪ್ರಭಾಸ್ Prbhas

ಅವರು ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ನಟನೆಯಲ್ಲಿಯೂ, ನಿರ್ದೇಶನದಲ್ಲಿಯೂ ಅದ್ಭುತ ನೀಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಇಡೀ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ವಿಶೇಷವಾಗಿ ಈ ದೃಷ್ಟಿಗೆ ನಂಬಿಕೆ ಇಟ್ಟ ಹೊಂಬಾಳೆ ಫಿಲಮ್ಸ್ಗಿಗೂ ಗೌರವ
ಜೂ.ಎನ್.ಟಿ.ಆರ್ Jr. NTR

ನಂಬಿಕೆ ಮತ್ತು ಜಾನಪದದ ಮಿಶ್ರಣವೇ ಕಾಂತಾರ ಚಾಪ್ಟರ್-1 ಸಿನಿಮಾ
ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ K Annamalai

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...