- ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು
- ಅದ್ಬುತ ಸಿನಿಮ್ಯಾಟಿಕ್ ಟ್ರೈಲರ್ ಗೆ ಸಿನಿರಸಿಕರು ಫುಲ್ ಥ್ರಿಲ್ಲ್
- ಹೊಸತೊಂದು ಲೋಯಕ್ಕೆ ಕರೆದೊಯ್ಯೋ ರೋಚಕ ಟ್ರೈಲರ್
ಅಂತೂ ಇಂತೂ ಸಿನಿ ರಸಿಕರು ನಿರೀಕ್ಷಿಸುತ್ತಿದ್ದ ಕಾಂತಾರ ಚಾಪ್ಟರ್ 1 Kanthara Chapter 1 ಟ್ರೈಲರ್ ಕೊನೆಗೂ ಅಬ್ಬರಿಸಿದೆ. ಟ್ರೈಲರ್ ನ ಅದ್ದೂರಿತನಕ್ಕೆ ಪ್ರೇಕ್ಷಕರು ಕುಣಿದೆದ್ದಿದ್ದಾರೆ. ಹೊಸ ಲೋಕವೊಂದಕ್ಕೆ ಕರೆದೊಯ್ಯುವ ಟ್ರೈಲರ್ ನ ಕಿಚ್ಚು ಸಿನಿಮಾದ ಕುರಿತು ನಿರೀಕ್ಷೆಗಳನ್ನು ಇನ್ನಷ್ಟು ಜಾಸ್ತಿ ಮಾಡಿದೆ. ಹೊಂಬಾಳೆ ಫಿಲ್ಮ್ Hombale Films ನಿರ್ಮಿಸಿದ ರಿಷಬ್ ಶೆಟ್ಟಿ Rishabh Shetty ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಕಳೆದ ಕೆಲವು ಸಮಯಗಳಿಂದ ಈ ಚಿತ್ರದ ಕುರಿತು ಭಾರೀ ನಿರೀಕ್ಷೆ, ಹೈಪ್ ನೀಡುವ ಮಾತುಗಳು ಕೇಳಿಬರುತ್ತಿತ್ತು. ಇದೀಗ ಟ್ರೈಲರ್ ಆ ಎಲ್ಲಾ ಹೈಪ್ ಗಳಿಗೆ ಇನ್ನೊಂದಷ್ಟು ತುಪ್ಪ ಸುರಿದಿದೆ.
ದೈವಿಕತೆಯ ಹೊಸ ಲೋಕ
ಟ್ರೈಲರ್ ನಲ್ಲಿ ರಿಷಬ್ ಶೆಟ್ಟಿ ಮತ್ತೊಮ್ಮೆ ಗುಡುಗಿನಂತೆ ಕಾಣಿಸಿಕೊಂಡಿದ್ದಾರೆ. ದೈವಿಕತೆಯ ಜೊತೆ ಭಯ, ಗೌರವ ಮೂಡಿಸುವಂತಹ ಪಾತ್ರದಲ್ಲಿ ಅವರು ಅಬ್ಬರಿಸಿದ್ದಾರೆ. ಪ್ರೇಕ್ಷಕರಿಗೆ ವಿಶೇಷ ಸಿನಿಮ್ಯಾಟಿಕ್ ಅನುಭವ ಕೊಡುವಂತಹ ಎಲ್ಲಾ ಹಿಂಟ್ ಅನ್ನು ಈ ಒಂದು ಟ್ರೈಲರ್ ಕೊಟ್ಟಿದೆ. ನಟಿ ರುಕ್ಮಿಣಿ ವಸಂತ್ Rukmini Vasanth ಇಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ರಿಷಬ್ ಶೆಟ್ಟಿ ಅವರು ಕಾಡಿನಲ್ಲಿ ಬದುಕುವ ಜನರ ಸಮೂಹವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಇಲ್ಲಿ ರಾಜನಾಗಿ ಕಾಣಿಸಿಕೊಂಡಿದ್ದಾರೆ.
ಕಾಡು, ಕಾಡಿನ ಜನರು, ಅವರ ನಂಬಿಕೆ, ಆಚರಣೆ, ಜೀವನದ ಹೋರಾಟ ಎಲ್ಲವನ್ನೂ ಕಾಂತಾರ ಚಾಪ್ಟರ್ 1 ನಲ್ಲಿ ನೋಡಬಹುದು ಎನ್ನುವ ಸುಳಿವನ್ನು ಟ್ರೈಲರ್ ಕೊಟ್ಟಿದೆ. ಕಲ್ಲು, ಕಾರಣಿಕ, ಮಿಂಚಿನಂತ ಹಿನ್ನೆಲೆ, ಗುಡುಗುವಂತಹ ದೃಶ್ಯಗಳು ಟ್ರೈಲರ್ ನಲ್ಲಿದೆ. ಕಾಡಿನ ಜನರ ವ್ಯಾಪಾರ, ಜೀವನ, ರಾಜನ ಆಳ್ವಿಕೆ, ದಬ್ಬಾಳಿಕೆ ಎಲ್ಲವೂ ಈ ಒಂದು ಟ್ರೈಲರ್ನಲ್ಲಿ ಕಾಣಿಸಿದ್ದು ಇವೆಲ್ಲಾ ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ. ಅಕ್ಟೋಬರ್-2 ರಂದು ಬಹುಭಾಷೆಯಲ್ಲಿ ಚಿತ್ರ ರಿಲೀಸ್ ಆಗಲಿದ್ದು ಭಾರತೀಯ ಸಿನಿಮಾರಂಗವೂ ಕಾತರಗೊಂಡಿದೆ.