ಜುಲೈ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ “ಕಪಟ ನಾಟಕ‌ ಸೂತ್ರಧಾರಿ”

Date:

  • ಜುಲೈ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ “ಕಪಟ ನಾಟಕ‌ ಸೂತ್ರಧಾರಿ”
  • ಐಟಿ ವೃತ್ತಿಪರರಾಗಿದ್ದ ಧೀರಜ್ ಎಂ.ವಿ ಇದೇ ಮೊದಲ ಬಾರಿಗೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ
  • ಚಿತ್ರದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದ್ದು, ಜುಲೈ 4 ಕ್ಕೆ ತೆರೆಗೆ ಬರಲಿದೆ ಚಿತ್ರ

ಹೆಸರು ಹಾಗೂ ಪೋಸ್ಟರ್ ಗಳಿಂದಲೇ ಜನರ ಗಮನ ಸೆಳೆಯುತ್ತಿದ್ದ “ಕಪಟ ನಾಟಕ ಸೂತ್ರಧಾರಿ” Kapata Nataka Sutradhari ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದ್ದು, ಚಿತ್ರ ವಿಭಿನ್ನವಾಗಿರಬಹುದೆಂಬ ನಿರೀಕ್ಷೆ ಸಿನಿ ಪ್ರಿಯರಲ್ಲಿ ಮೂಡಿದೆ‌. ಸ್ಯಾಂಡಲ್ ವುಡ್ ಗೆ ಹೊಸಬರ ಎಂಟ್ರಿ ಆಗ್ತಾನೇ ಇರತ್ತೆ, ಉತ್ತಮ ಸಿನಿಮಾಗಳ ಮೂಲಕ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡುವವರು ಸದಾ ಬೆಳಕಿಗೆ ಬರುತ್ತಿರುತ್ತಾರೆ. ಅಂತಹದೇ ಪ್ರಯತ್ನ ಇದೀಗ ಈ ಸಿನಿಮಾದ ಮೂಲಕ ಮಾಡ್ತಿದ್ದಾರೆ ನಿರ್ದೇಶಕ ಧೀರಜ್ ಎಂ.ವಿ. Dheeraj M V ವಿ.ಎಸ್‌.ಕೆ. ಸಿನಿಮಾಸ್ VSK cinemas ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ಬಹುತೇಕ ಹೊಸಬರೇ ನಿರ್ಮಿಸಿದ್ದಾರೆ.

ಸಾಮಾಜಿಕ ಪ್ರಸ್ತುತತೆಯ ವಿಷಯದೊಂದಿಗೆ ಗಮನ ಸೆಳೆಯುತ್ತದೆ

ಒಂದು ಸಮುದಾಯದ ಯುವಕನೊಬ್ಬ ಇನ್ನೊಂದು ಸಮುದಾಯದ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಸುತ್ತ ಸುತ್ತುತ್ತದೆ ಚಿತ್ರದ ಕತೆ. ಕುತೂಹಲದಿಂದಲೇ ದೇವಸ್ಥಾನಗಳನ್ನು ಸುತ್ತುವ ಬೇರೆ ಧರ್ಮೀಯನಿಗೆ ಬಂದೆರಗುವ ಉದ್ವಿಗ್ನ ಘಟನೆಗಳ ಸರಮಾಲೆಯನ್ನು ಎತ್ತಿಹಿಡಿಯುತ್ತದೆ. ಟ್ರೇಲರ್, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ಕುಶಲತೆಯಿಂದ ಬಳಸುವುದನ್ನು ಅನ್ವೇಷಿಸುವ ಒಂದು ರೋಮಾಂಚಕಾರಿ ಕಥೆಯ ನೋಟವನ್ನು ನೀಡುತ್ತದೆ.

ಚಿತ್ರಕ್ಕೆ ವೀರೇಶ್ ಎನ್‌.ಟಿ.ಎ ಅವರ ಛಾಯಾಗ್ರಹಣ ಮತ್ತು ಪ್ರಸನ್ನ ಕುಮಾರ್ ಎಂ.ಎಸ್ ಅವರ ಸಂಗೀತ ಸಂಯೋಜನೆ ಇದೆ. ಜುಲೈ 4 ಕ್ಕೆ ಚಿತ್ರ ತೆರೆಗೆ ಬರಲಿದ್ದು ಪ್ರೇಕ್ಷಕ ಪ್ರಭುಗಳು ಚಿತ್ರವನ್ನು ಗೆಲ್ಲಿಸಲಿದ್ದಾರಾ ಕಾದು ತಿಳಿಯಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್

ದೇವಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ್ರು ನಟ ದರ್ಶನ್ ಪತ್ನಿ ಜೊತೆಗೆ ರಿಲ್ಯಾಕ್ಸ್ ಮೂಡ್...

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ

2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ...

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್

ಥ್ರಿಲ್ಲಿಂಗ್ ಸೌಂಡ್ ಮಾಡ್ತಿದೆ “ಅನಂತಕಾಲಂ” ಟೀಸರ್ ಹಾರರ್ ಎಲಿಮೆಂಟ್ ಗಳು ಟೀಸರ್ ನಲ್ಲಿ...

Are Are Yaro Evalu Song Lyrics – Andondittu Kaala Movie

Are Are Yaro Evalu Song Details: SongAre Are Yaro...