ಕಿಚ್ಚ ಸುದೀಪ್ ಚಿತ್ರರಂಗದಲ್ಲಿ ಬೆಳೆಯಲು ಅನುಭವಿಸಿದ ಕಷ್ಟಗಳ ಕಥೆ ಇಲ್ಲಿದೆ – Kiccha Sudeep life story in kannada

Date:

ಕನ್ನಡದ ಫೇಮಸ್ ನಟ, ಎಲ್ಲರ ಪ್ರೀತಿಗೆ ಫಾತ್ರವಾಗಿರುವ, ಕರುಣಾಳು, ಹೃದಯವಂತ ಎಂದೆಲ್ಲಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ಖ್ಯಾತ ನಟ ಕಿಚ್ಚ ಸುದೀಪ್ Kiccha Sudeep. ಇವರ ಜೀವನದಲ್ಲಿ ನಡೆದಿದ್ದ ಮನಕಲುಕುವ, ಕಣ್ಣೀರಿನ ಕಥೆ ಇಲ್ಲಿದೆ ನೋಡಿ. ಎಂ. ಸಂಜೀವ ಹಾಗೂ ಸರೋಜಾ ದಂಪತಿಗಳ ಸುಪುತ್ರ ಸುದೀಪ್ ಜನಿಸಿದ್ದು 1973 ರ ಸೆಪ್ಟೆಂಬರ್ 2ರಂದು. ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿಯವರಾದ ಇವರು, ಶಿವಮೊಗ್ಗದಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸಗಳನ್ನು ಮುಗಿಸಿ, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿದ್ದಾರೆ.

ಜೀವನ ಪಯಣದಲ್ಲಿ ಕಲ್ಲು ಮುಳ್ಳುಗಳು

ಇಂಜಿನಿಯರಿಂಗ್ ನಂತರ ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ನಲ್ಲಿ ನಟನೆಯ ವಿದ್ಯಾಭ್ಯಾಸವನ್ನು ಮಾಡ್ತಾರೆ. ಮನೆಯಲ್ಲಿ ಯಾವುದೇ ಹಣದ ಕೊರತೆ ಇಲ್ದೇ ಇದ್ರೂ, ಅರಾಮಾಗಿ ಬ್ಯುಸಿನೆಸ್ ಮಾಡಿಕೊಂಡು ಇರುವ ಸಾಧ್ಯತೆ ಇದ್ರೂ ಸುದೀಪ್ ಇದೆಲ್ಲದನ್ನೂ ನಿರಾಕರಿಸಿ, ತಮ್ಮ ಸ್ವಂತ ದುಡಿಮೆಯಿಂದ, ಪ್ರತಿಭೆಯಿಂದ ತಾನು ಹಣ ಗಳಿಸ್ಬೇಕು ಅನ್ನೋ ಪಣ ತೊಟ್ಟು ಚಿತ್ರರಂಗಕ್ಕೆ ಕಾಲಿಡ್ತಾರೆ. ಮೊದಲು ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡ್ತಾರೆ. ಆದ್ರೆ ಯಾ ಚಿತ್ರವೂ ಕೈಹಿಡಿಯೋದೇ ಇಲ್ಲ. ಸಾಕಷ್ಟು ನಷ್ಟ ಅನುಭವಿಸಿ, ಮೈ ತುಂಬಾ ಸಾಲ ಆಗತ್ತೆ. ಹಲವರು ಸುದೀಪ್ ಅನ್ನು ತಿರಸ್ಕರಿಸಿದ್ದಾರೆ, ಪತ್ರಿಕೆಗಳು ಬೈದು ಬರೆದಿದ್ದಾರೆ, ಅನಿಷ್ಟ ಎಂದು ಹೇಳಿದವರಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಸುದೀಪ್. ಅವಕಾಶಕ್ಕೆ ಹಲವು, ನಿರ್ದೇಶಕರ, ನಿರ್ಮಾಪಕರ ಮನೆ ಬಾಗಿಲುಗಳನ್ನೂ ಕಾದಿದ್ದಾರೆ

ಚಿತ್ರರಂಗದ ಕಠಿಣ ಹಾದಿ

1996 ರಲ್ಲಿ “ಬ್ರಹ್ಮ” ಸಿನಿಮಾ ಕೆಲವು ದಿನಗಳ ಶೂಟಿಂಗ್ ನಂತರ ಸ್ಥಗಿತಗೊಂಡಿತು, “ಓ ಕುಸುಮ ಬಾಲೆ” ದುರಾದೃಷ್ಟವೆಂದರೆ, ಹಲವು ಕಾರಣಗಳಿಂದ ಈ ಸಿನಿಮಾ ತೆರೆಗೆ ಬರಲೇ ಇಲ್ಲ. “ತಾಯವ್ವ” ಸಿನಿಮಾ 3 ತಿಂಗಳೂ ಓಡಲಿಲ್ಲ. 2000 ಇಸವಿಯಲ್ಲಿ ಬಿಡುಗಡೆಯಾದ “ಸ್ಪರ್ಷ” ಸಿನಿಮಾದ ಪ್ರಮೋಷನ್ ಗೋಸ್ಕರ ಸುದೀಪ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಪೋಸ್ಟರ್ ಗಳನ್ನು ಅಂಟಿಸುವುದರಿಂದ ಹಿಡಿದು, ಬ್ಯಾನರ್ ಕಟ್ಟೋದು ಇಂತಹಾ ಎಲ್ಲಾ ಕೆಲಸಗಳನ್ನು ಸುದೀಪ್ ಸ್ವತಃ ತಾವೇ ಮಾಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಎರಡನೇ ಸಿನಿಮಾ “ಹುಚ್ಚ” ಸಿನಿಮಾ 2001 ರಲ್ಲಿ ಬಿಡುಗಡೆಯಾಗಿ ಫುಲ್ ಫೇಮಸ್ ಆಯ್ತು. ಆದ್ರೆ ಈ ಚಿತ್ರದ ಚಿತ್ರೀಕರಣದ ಸಮಯದಲ್ಲೂ ಸುದೀಪ್ ಕಾಲಿಗೆ ತುಂಬಾ ಪೆಟ್ಟು ಮಾಡಿಕೊಂಡಿರುತ್ತಾರೆ. ಆದರೆ ಇದನ್ನು ಲೆಕ್ಕಕ್ಕಿಡದೇ 50 ದಿನಗಳ ಕಾಲ ಶೂಟಿಂಗ್ ಯಶಸ್ವಿಯಾಗೋ ತರ ಮಾಡ್ತಾರೆ.

ಹೀಗೆಲ್ಲಾ ಕಲ್ಲು ಮುಳ್ಳಿನ ಹಾದಿಯನ್ನು ತುಳಿದ ಸುದೀಪ್ ಇದೀಗ ಅಭಿನಯ ಚಕ್ರವರ್ತಿಯಾಗಿ ಬೆಳೆದಿದ್ದಾರೆ. ಈಗ ನಿರ್ಮಾಪಕರು, ನಿರ್ದೇಶಕರೇ ಇವರ ಕಾಲ್ ಶೀಟ್ ಗಾಗಿ ಕ್ಯೂನಲ್ಲಿ ಕಾಯುವ ಪರಿಸ್ಥಿತಿ ಇದೆ. ಕಷ್ಟಪಟ್ಟರೆ ಏನನ್ನೂ ಸಾಧ್ಯವಾಗಿಸಬಹುದು ಎಂಬುದನ್ನು ಇವರ ಜೀವನ ನೋಡಿ ನಾವು ಕಲಿಯಬಹುದಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...