- ಮಾರ್ಚ್ 21 ಕ್ಕೆ ತೆರೆಯ ಮೇಲೆ “ಕಿಸ್ ಕಿಸ್ ಕಿಸ್ಸಿಕ್”
- ಖ್ಯಾತ ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ನಿರ್ಮಾಣದ ಚಿತ್ರ
- ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲೂ ಹೊರಬರುತ್ತಿದೆ ಈ ಚಿತ್ರ
ಶಿವ ಹರೇ Shiv Hare ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ “ಕಿಸ್ ಕಿಸ್ ಕಿಸ್ಸಿಕ್” Kiss Kiss Kissik ಸಿದ್ಧವಾಗಿದ್ದು ಇದೇ ಮಾರ್ಚ್ 21 ರಂದು ಬಹುಭಾಷೆಗಳಲ್ಲಿ ತೆರೆಯ ಮೇಲೆ ಬಿಡುಗಡೆಗೊಳ್ಳುತ್ತಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ನೃತ್ಯ ಸಂಯೋಜನೆಯಲ್ಲಿ ಹೆಸರಾಗಿರುವ ಗಣೇಶ್ ಆಚಾರ್ಯ Ganesh Acharya V2S Production and Entertainment ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರ ಇದಾಗಿದೆ.
ರೊಮ್ಯಾನ್ಸ್, ಕಾಮಿಡಿ, ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸುಶಾಂತ್ Sushanth, ಜಾನ್ಯಾ ಜೋಷಿ Jaanya Joshi, ವಿಧಿ Vidhi ಮುಂತಾದ ಹೊಸಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು, ವಿಜಯ್ ರಾಜ್, ಮುರಳಿ ಶರ್ಮಾ, ಅಲಿ ಸಾಗರ್, ಸುನಿಲ್ ಪಾಲ್, ಅಜಯ್ ಜಾಧವ್ ಮುಂತಾದವರು ನಟಿಸಿದ್ದಾರೆ. ಅಜಯ್ ಪಾಂಡೆ ಛಾಯಾಗ್ರಹಣ, ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ, ಮನೋಜ್ ಮಗರ್ ಸಂಕಲನ ಚಿತ್ರಕ್ಕಿದೆ.