ತುಳುನಾಡಿನ ಮಣ್ಣಿನ ಕಥೆ ಹೇಳುತ್ತೆ “ಕೋಲ”

Date:

  • ದೈವಾರಾಧನೆಯೇ ಈ ಸಾಕ್ಷ್ಯಚಿತ್ರದ ಜೀವ; ತುಳುನಾಡಿನ ಮಣ್ಣಿನ ಕಥೆ ಹೇಳುತ್ತೆ “ಕೋಲ”
  • ದೀಪಕ್ ಹೆಗ್ಡೆ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದೆ ತುಳುನಾಡ ಪರಂಪರೆಯ ಸಾಕ್ಷ್ಯಚಿತ್ರ “ಕೋಲ”
  • ಬಿಡುಗಡೆಯಾಗಿದೆ ಪರಶುರಾಮನ ಸೃಷ್ಟಿಯ ತುಳುನಾಡ ಶ್ರೀಮಂತ ದೈವಾರಾಧನೆ ಸಂಸ್ಕೃತಿಯನ್ನು ಬಿಂಬಿಸುವ ಸಾಕ್ಷ್ಯಚಿತ್ರ

ತುಳುನಾಡು ಎಂದ ಕೂಡಲೇ ನೆನಪಾಗುವುದು ತುಳು ಭಾಷೆಯೊಂದಿಗೆ, ಇಲ್ಲಿನ ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ದೈವಾರಾಧನೆ, ಭೂತ ಕೋಲ, ಯಕ್ಷಗಾನ, ಪಾಡ್ದನ ಮುಂತಾದ ಕಲೆ, ಆರಾಧನಾ ಪರಂಪರೆ. ಇಂತಹಾ ಪ್ರಸಿದ್ಧ ಕಲಾತ್ಮಕ, ಆಧ್ಯಾತ್ಮಿಕ ಆಚರಣೆಯೇ ಕೋಲ. ಇದರ ಹಿಂದಿರುವ ಇತಿಹಾಸ, ದಂತಕಥೆ, ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಚಂದದ ಪ್ರಯತ್ನವನ್ನು “ಕೋಲ” Kola ಎಂಬ ಡಾಕ್ಯುಮೆಂಟರಿ ಫಿಲ್ಮ್ Documentary Film ನ ಮೂಲಕ ಮಾಡಿದ್ದಾರೆ ನಿರ್ದೇಶಕ ದೀಪಕ್ ಹೆಗ್ಡೆ Deepak Hegde ಹಾಗೂ ಅವರ ತಂಡ. ಶರಧಿ ಫಿಲಂಸ್ Sharadhi Filmsಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಾಕ್ಷ್ಯಚಿತ್ರ “ವೇದಸ್ಯ ಮ್ಯೂಸಿಕ್” Vedasya Music ಯೂಟ್ಯೂಬ್ ಚಾನಲ್ ಮೂಲಕ ಜಗತ್ತಿಗೆ ತೆರೆದುಕೊಂಡಿದೆ.

ಹಿರಿಯರಾದ ಡಾ.ಲಕ್ಷ್ಮಿ ಪ್ರಸಾದ್, ವರ್ಧಮಾನ್ ಜೈನ್, ಆನಂದ ಕೆಳಪುತ್ತಿಗೆ, ಮುನಿರಾಜ್ ಚೌಟ, ನಾಕ್ರ ಪರ್ವ ಮುಂತಾದವರ ಮಾರ್ಗದರ್ಶನದೊಂದಿಗೆ ಅವರದೇ ವಿವರಣೆ, ನಿರೂಪಣೆಯ ಮೂಲಕ ಕುತೂಹಲಕಾರಿಯಾಗಿ ಮಾಹಿತಿಯನ್ನು ಬಿಚ್ಚಿಡುತ್ತಾ ಸಾಗುತ್ತದೆ “ಕೋಲ”. ಹೃತೀಶ್ ಎನ್. ಸಿನಿಮಾಟೋಗ್ರಫಿ, ಬಲರಾಮ್ ಆರ್ ಸಂಕಲನ, 3D, VFX ಅಭಿಜಿತ್ ಶ್ರೀನಿವಾಸ್ ಮುಂತಾದ ಪ್ರತಿಭಾವಂತರನ್ನೊಳಗೊಂಡ ತಂಡದ ಪರಿಶ್ರಮದ ಫಲ ಈ ಸಾಕ್ಷ್ಯಚಿತ್ರವನ್ನು ಇನ್ನಷ್ಟು ಚಂದಗಾಣಿಸಿದೆ.

KOLA FULL DOCUMENTARY FILM 2025 :

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ ಕನ್ನಡದ “ಲವ್...

ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ”

ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ” ಹೈ5 ಸ್ಟುಡಿಯೋಸ್ ನ...

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್ ದೀಪಕ್ ಎಸ್ ಅವಂದಕರ್ ನಿರ್ದೇಶನದಲ್ಲಿ ಮೂಡಿ...

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ”

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ" ಪವನ್ ಭಟ್ ಆಕ್ಷನ್ ಕಟ್ ಹೇಳಿರುವ,...