- ಸದ್ಯದಲ್ಲೇ ತೆರೆಗೇರಲಿದೆ ಕೊಂಕಣಿ ಕಾಮಿಡಿ ಮೂವೀ “ಜೆವಣ್”
- ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ “ಜೆವಣ್”
- ರಾಕೇಶ್ ಕಾಮತ್, ಶಿಲ್ಪಾ ಕಾಮತ್ ಮುಖ್ಯಭೂಮಿಕೆಯಲ್ಲಿರುವ ಕಾಮಿಡಿ ಜಾನರ್ ಫ್ಯಾಮಿಲಿ ಮೂವೀ
ಶ್ರೀ ಮಹಾಮಾಯಿ ಸಿನಿ ಕ್ರಿಯೇಷನ್ಸ್ Shree Mahamayi Cine Creations, ಧಾತ್ರಿ ಸಿನಿ ಕಂಬೈನ್ Dhatri Cine Combine ಬ್ಯಾನರ್ ಅಡಿಯಲ್ಲಿ ಕುಂಬ್ಳೆ ವೆಂಕಟೇಶ್ ಭಟ್ ನಿರ್ಮಾಣದಲ್ಲಿ ಬೆಳ್ಳಿತೆರೆಯ ಮೇಲೆ ಮಿಂಚಲು ಬರ್ತಿದೆ ಸ್ಪೆಷಲ್ ಜಾನರ್ ಕೊಂಕಣಿ ಮೂವೀ “ಜೆವಣ್” Jevann. ರಾಕೇಶ್ ಕಾಮತ್ ಪುತ್ತೂರು Rakesh Kamath Puttur ಹಾಗೂ ಕಲರ‍್ಸ್ ಕನ್ನಡದ ಧಾರವಾಹಿ ನಟಿ ಶಿಲ್ಪಾ ಕಾಮತ್ Shilpa Kamath ಮೈನ್ ರೋಲ್ ಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಕರೋಪಾಡಿ ಅಕ್ಷಯ್ ನಾಯಕ್ Karopady Akshay Nayak. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಪ್ರಕಾಶ್ ಮಹಾದೇವನ್, ಮಿಲನ್ ಕೆ.ಪಿ ಮತ್ತು ಅಪೇಕ್ಷಾ ಪೈ ಸ್ವರದಲ್ಲಿದೆ ಹಾಡುಗಳು. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಘಸ್ಟಿ- ದಿ ಬಾರ್ ಆಂಥೆಮ್” ಸಾಂಗ್ ಕೇಳುಗರಿಗೆ ಫುಲ್ ಮಜಾ ಕೊಡ್ತಿದೆ.
ಹಿಂದೆಂದೂ ಇಲ್ಲದ ಕಾಮಿಡಿ “ಜೆವಣ್” ಕೊಡತ್ತೆ
ಕ್ಯಾಟೆರಿಂಗ್ ತಂಡದಲ್ಲಿ ಕೆಲಸ ಮಾಡುವ ಮೂರು ಹುಡುಗರು ಮದುವೆಯಾಗಲು ಹುಡುಗಿಯನ್ನು ನೋಡಲು ಹೋಗುವುದರಿಂದ ಪ್ರಾರಂಭವಾಗುವ ಸಿನಿಕಥೆ ಆ ಮೂವರ ಕಷ್ಟ-ಸುಖಗಳ ಅಪರೂಪದ ಕಥೆಯನ್ನು ಹಾಸ್ಯ ತುಂಬಿದ ಸಂಭಾಷಣೆಗಳ ಮೂಲಕ ಹೇಳುತ್ತಾ ಸಾಗುತ್ತದೆ. ಹೀರೋ ಎಂಟ್ರಿ ಬಳಿಕ ಮತ್ತೊಂದಷ್ಟು ತಿರುವುಗಳನ್ನು ಪಡೆಯುತ್ತಾ ಮುಂದುವರೆಯುತ್ತದೆ. ಒಟ್ಟಾರೆಯಾಗಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುವ ಪ್ರಯತ್ನ ಮಾಡಿದೆ ಸಿನಿತಂಡ.
ಇವರೆಲ್ಲರೂ ಚಿತ್ರಕ್ಕಾಗಿ ಶ್ರಮಿಸಿದ್ದಾರೆ
ಮೂರು ಮುತ್ತು ಖ್ಯಾತಿಯ ಸಂತೋಷ ಪೈ ಕುಂದಾಪುರ, ಸತೀಶ್ ಪೈ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್ ಶೆಣೈ, ವೆಂಕಟೇಶ್ ಭಟ್, ಚಂದ್ರಕಾಂತ್ ಭಟ್, ವತ್ಸಲಾ ನಾಯಕ್, ಸುಲತಾ ನಾಯಕ್, ದಾಮೋದರ್ ಹೆಗ್ಡೆ, ಮಂಗೇಶ್ ಭಟ್ ವಿಟ್ಲ, ದಿನೇಶ್ ಪ್ರಭು ಕಲ್ಲೊಟ್ಟೆ ಅಲ್ಲದೇ ಇನ್ನೂ ಹಲವು ಪ್ರತಿಭಾವಂತರ ತಂಡದ ನಟನೆಯಿದೆ. ಕಥೆ ಹಾಗೂ ಸಂಭಾಷಣೆ ರಾಜ್ಯ ಪ್ರಶಸ್ತಿ ವಿಜೇತ ಎಂ.ಕೆ.ಮಠ, ಸೂರಜ್ ಭಟ್ ಬಂಟ್ವಾಳ, ಸಾಹಿತ್ಯ ಸೂರಜ್ ಭಟ್ ಬಂಟ್ವಾಳ, ಸಂಗೀತ ಸಾತ್ವಿಕ್ ಪಡಿಯಾರ್ ಅವರದ್ದು. ಅರುಣ್ ರೈ ಪುತ್ತೂರು ಸಿನಿಮಾಟೋಗ್ರಾಫಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸುತ್ತಮುತ್ತಲಿನಲ್ಲಿ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ಟ್ರೇಲರ್ ಹೊರತರಲಿದೆ ಚಿತ್ರತಂಡ.