ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”

Date:

  • ಜೂನ್ 20 ರಂದು ರಾಯಲ್ ಆಗಿ ತೆರೆಗಪ್ಪಳಿಸಲಿದೆ “ಕುಬೇರ”
  • ದುಡ್ಡೇ ದೊಡ್ಡಪ್ಪ, ನ್ಯಾಯ ನೀತಿಗಳಿಗಿಲ್ಲ ಸ್ಥಾನಮಾನ ಎನ್ನತ್ತೆ ಟ್ರೇಲರ್
  • ‘ಡಾಲರ್ ಡ್ರೀಮ್ಸ್’ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ

ಇತ್ತೀಚೆಗಷ್ಟೇ ಬಹುನಿರೀಕ್ಷಿತ ಚಿತ್ರ “ಕುಬೇರ” ದ Kubera ಟ್ರೇಲರ್ ಹೊರಬಿದ್ದಿದ್ದು, ಕೊನೆಗೂ ಅಭಿಮಾನಿಗಳ ಕಾಯುವಿಕೆಗೆ ಬ್ರೇಕ್ ಬೀಳುವ ಸಂದರ್ಭ ಬಂದಿದೆ. ದಕ್ಷಿಣ ಚಿತ್ರರಂಗದ ಖ್ಯಾತ ತಾರೆಯರಾದ ರಶ್ಮಿಕಾ ಮಂದಣ್ಣ, Rashmika Mandanna ಧನುಷ್, Dhanush ನಾಗಾರ್ಜುನ ಅಕ್ಕಿನೇನಿ Nagarjuna Akkineni ಹಾಗೂ ಜಿಮ್ ಸರ್ಭ್ Jim Sarbh ಅಭಿನಯದ ಪ್ಯಾನ್ ಇಂಡಿಯಾ ಚಿತ್ರ “ಕುಬೇರ” ಇದೇ ಜೂನ್ 20 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ‘ಡಾಲರ್ ಡ್ರೀಮ್ಸ್’ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲ Shekhar Kammula ನಿರ್ದೇಶಿಸಿದ್ದು, ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್.ಎಲ್.ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ಗಳ ಅಡಿಯಲ್ಲಿ ಸುನೀಲ್ ನಾರಂಗ್ Suneel Narang ಮತ್ತು ಪುಸ್ಕೂರ್ ರಾಮ್ ಮೋಹನ್ ರಾವ್ Puskoor Ram Mohan Rao ಜಂಟಿಯಾಗಿ ನಿರ್ಮಿಸಿದ್ದಾರೆ.

”ಈ ದೇಶದಲ್ಲಿ ದುಡ್ಡು ಪವರೇ ಕೆಲಸ ಮಾಡುತ್ತೆ, ನ್ಯಾಯ ನೀತಿ ಅಲ್ಲ! ಇದು ಚರಿತ್ರೆ”

ಟ್ರೇಲರ್ ನಲ್ಲಿ ಫುಲ್ ಹೈಲೈಟ್ ಆಗಿರೋ ಈ ಡೈಲಾಗ್ ಚಿತ್ರದ ಮುಖ್ಯ ಕಥಾಹಂದರವನ್ನು ಬಿಚಚಚ್ಚಿಡತ್ತೆ. ಮಹತ್ವಾಕಾಂಕ್ಷೆ, ಅಧಿಕಾರ ಮತ್ತು ನೈತಿಕತೆ ಮುಖಾಮುಖಿಯಾಗುವ ಪ್ರಪಂಚದ ಒಂದು ತೀವ್ರ ನೋಟ ಇದರಲ್ಲಿದೆ. ಟ್ರೇಲರ್ ನೋಡಿದ್ರೆ, ನಟ ಧನುಷ್ ಚಿತ್ರದಲ್ಲಿ ನಾಗಾರ್ಜುನರಿಂದ ಮಾರ್ಗದರ್ಶನ ಪಡೆದ ಭಿಕ್ಷುಕನ ಪಾತ್ರ ನಿರ್ವಹಿಸಿದ್ದಾರೆ. ನಾಗಾರ್ಜುನ ಪ್ರಭಾವಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ದೇಶ ಕಾನೂನು ಮತ್ತು ನಿಯಮಗಳಿಂದಲ್ಲ, “ಹಣ” ಹಾಗೂ “ಅಧಿಕಾರ”ದಿಂದ ಮಾತ್ರ ನಡೆಸಲ್ಪಡುತ್ತದೆ ಎಂದು ನಂಬಿದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲಿ ತೋರಿಸಿರುವಂತೆ, ಚಿತ್ರದಲ್ಲಿ ಧನುಷ್ ಅವರ ಪ್ರೇಯಸಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ದೇವಿ ಶ್ರೀ ಪ್ರಸಾದ್ ಅವರ ಸಂಗೀತ, ನಿಕೇತ್ ಬೊಮ್ಮಿ ಸಿನಿಮಾಟೋಗ್ರಫಿ, ಕಾರ್ತಿಕ ಶ್ರೀನಿವಾಸ ಆರ್ ಸಂಕಲನ ಚಿತ್ರಕ್ಕಿದೆ. ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳು ಪಂಚ ಭಾಷೆಗಳಲ್ಲಿ ಮೂಡಿಬರುತ್ತಿರುವ ಕುಬೇರ ಚಿತ್ರ ಟ್ರೇಲರ್ ನಲ್ಲಿ ಮೂಡಿಸಿದ ಪ್ರಶ್ನೆಗಳಿಗೆ ಹೇಗೆ ಉತ್ತರ ಕಂಡುಕೊಳ್ಳುತ್ತದೆ, ಸಿನಿ ಪ್ರಿಯರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆಯೇ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...