- ಪಕ್ಕಾ ಕರಾವಳಿಯ ಸ್ವಾದದ “ಕುಡ್ಲ ನಮ್ದು ಊರು” ಸೆಪ್ಟೆಂಬರ್ 5 ರಂದು ತೆರೆಗೆ
- ದುರ್ಗಾಪ್ರಸಾದ್ ಆರ್ ಕೆ, ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ.
- ಹೆಸರೇ ಹೇಳುವಂತೆ ಇದು ಕುಡ್ಲ, ಅಂದರೆ ಮಂಗಳೂರಿನ ಹಿನ್ನೆಲೆಯಿರುವ ಕತೆಯಾಗಿದೆ.
ಹೊಸ ಪ್ರತಿಭೆಗಳೇ ಸೇರಿ ಅಭಿನಯಿಸಿ, ನಿರ್ಮಿಸುತ್ತಿರುವ “ಕುಡ್ಲ ನಮ್ದು ಊರು” Kudla Namdu Uru ಸಿನಿಮಾ ಸೆಪ್ಟೆಂಬರ್ 5 ಕ್ಕೆ ತೆರೆಗಪ್ಪಳಿಸಲಿದೆ. ದುರ್ಗಾಪ್ರಸಾದ್ ಆರ್ ಕೆ, Durgaprasad R K ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಚಿತ್ರ ಗೌಡ, ಅಂಕಿತಾ ಪದ್ಮ, ನರೇಂದ್ರ ಜೈನ್, ದುರ್ಗಾಪ್ರಸಾದ್ ಆರ್ ಕೆ ಚಿತ್ರ ನಿರ್ಮಾಣ ಮಾಡಿದ್ದಾರೆ.
ಕೋಸ್ಟಲ್ ಸ್ವಾದವನ್ನು ಉಣಬಡಿಸಿದ್ದಾರೆ
ಹೆಸರೇ ಹೇಳುವಂತೆ ಇದು ಕುಡ್ಲ, ಅಂದರೆ ಮಂಗಳೂರಿನ ಹಿನ್ನೆಲೆಯಿರುವ ಕತೆಯಾಗಿದೆ. 1990 ರ ಹೊತ್ತಿನ ಹುಡುಗರ ಬಾಲ್ಯ, ಆ ಕಾಲದ ಜನಜೀವನ, ತವಕ ತಲ್ಲಣ, ಭಾವನೆಗಳು ಎಲ್ಲವನ್ನೂ ಈ ಚಿತ್ರ ಕಟ್ಟಿಕೊಡಲಿದೆ. ಹಾಗಾಗಿ ಕರಾವಳಿ ಭಾಗದ ಕಲಾವಿದರೇ ಇಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿ, ಕೋಸ್ಟಲ್ ಸ್ವಾದವನ್ನು ಉಣಬಡಿಸಿದ್ದಾರೆ.
ಪ್ರೇಕ್ಷಕರನ್ನು ಕಾಡಲು ರೆಡಿಯಾಗಿದೆ
ರಮೇಶ್ ಪ್ರಕಾಶ್ ತುಮ್ಮಿನಾಡು, ಸ್ವರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ ಮೊದಲಾದವರು ವಿವಿಧ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಒಟ್ಟು ಮೂರು ಸುಮಧುರ ಹಾಡುಗಳಿವೆ. ಅವುಗಳಿಗೆ ನಿತಿನ್ ಶಿವರಾಮ್ ಸಂಗೀತ ನೀಡಿದ್ದು,ಮಯೂರ್ ಆರ್ ಶೆಟ್ಟಿ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನವಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ ಚಿತ್ರತಂಡ. ಇದೀಗ ಎಲ್ಲ ಪ್ರೊಡಕ್ಷನ್ ಹಂತದ ಕೆಲಸಗಳು ಪೂರ್ಣಗೊಂಡಿದ್ದು ಪ್ರೇಕ್ಷಕರನ್ನು ಕಾಡಲು “ಕುಡ್ಲ ನಮ್ದು ಊರು” ರೆಡಿಯಾಗಿದೆ.