ಸಾಮಾಜಿಕ ಸಮಸ್ಯೆಯ ಕತೆಯೊಂದಿಗೆ ತೆರೆಗೆ ಬರುತ್ತಿದೆ “ಕುಂಭಸಂಭವ”

Date:

  • ಸಾಮಾಜಿಕ ಸಮಸ್ಯೆಯ ಕತೆಯೊಂದಿಗೆ ತೆರೆಗೆ ಬರುತ್ತಿದೆ “ಕುಂಭಸಂಭವ”
  • ಭ್ರೂಣ ಹತ್ಯೆ ಮಾಡಬೇಡಿ ಎನ್ನುವ ಸಂದೇಶ ನೀಡುವ ಸಿನಿಮಾ
  • ಶೂಟಿಂಗ್ ಮುಕ್ತಾಯ ಶೀಘ್ರದಲ್ಲೇ ಬೆಳ್ಳಿತೆರೆಗೆ..!

ಸಾಮಾಜಿಕ ಸಮಸ್ಯೆಯನ್ನು ತೆರೆಯ ಮೇಲೆ ಹೇಳುವ ಚಿತ್ರಗಳು ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಬರುತ್ತಿರುತ್ತದೆ. ಇದೀಗ ಬಹುಮುಖ್ಯವಾದ ಸಾಮಾಜಿಕ ಸಮಸ್ಯೆಯನ್ನು ತೆರೆಯ ಮೇಲೆ ತರಲು ಹೊಸ ಚಿತ್ರವೊಂದು ಬರುತ್ತಿದೆ. ಈ ಚಿತ್ರದ ಹೆಸರು “ಕುಂಭಸಂಭವ” Kumbhasambhava ಭ್ರೂಣ ಹತ್ಯೆಯ ನೈಜಘಟನೆಯನ್ನು ಹೊಂದಿರುವ ಈ ಚಿತ್ರದ ಕಥಾಹಂದರ ಬಹು ಮುಖ್ಯ ಅಂಶಗಳನ್ನು ಹೇಳುವ ಪ್ರಯತ್ನ ಮಾಡಿದೆ.

ಸಮಾಜಕ್ಕೆ ಒಳ್ಳೆಯ ಸಂದೇಶದ ಸುಳಿವು

ಟಿ.ಎನ್ ನಾಗೇಶ್ T N Nagesh ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಮಿಲ್ಕಿ ಮೂನ್ ಮೂವೀಸ್ Milky Moon Movies ಲಾಂಛನದಲ್ಲಿ ನಾಗ ನಾಯ್ಕ, ನರೇಶ್ ಕುಮಾರ್, ತಾರಾ ಆರ್, ಸುನಂದ ಹಾಗು ಪುರುಷೋತ್ತಮ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಕೂಡ ಲಾಂಚ್ ಆಗಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಸುಳಿವು ನೀಡಿದೆ ಚಿತ್ರತಂಡ. ಮಂಡ್ಯದ ಬಳಿ ನಡೆದ ನೈಜಘಟನೆ ಕತೆಯೊಂದನ್ನು ಸಮಾಜಕ್ಕೆ ಸಂದೇಶ ಕೊಡುವ ಉದ್ದೇಶದಿಂದಲೇ ತೆರೆಗೆ ತರಲಾಗಿದೆ. ಯಾರು ಕೂಡ ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವನ್ನು ಈ ಚಿತ್ರ ನೀಡಲಿದೆ ಎನ್ನುವುದು ಚಿತ್ರತಂಡ ನೀಡುವ ಭರವಸೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯತ್ತಿದೆ. ಅಂದುಕೊಂಡಂತೆ ಆದರೆ ಅಕ್ಟೋಬರ್ ನಲ್ಲೇ ಚಿತ್ರವನ್ನು ತೆರೆಗೆ ತರುವ ಯೋಜನೆ ಸಿನಿಮಾ ತಂಡಕ್ಕಿದೆ.

ಚಿತ್ರದಲ್ಲಿ ನಟಿ ಪ್ರಿಯ, ಶೋಭಿತ, ಮಧುಶ್ರೀ, ಆದಿದೇವ್ ಶಂಕರ್ ಅಶ್ವಥ್, ಅರ್ಜುನ್ ದೇವ್, ಕೋಟೆ ಪ್ರಭಾಕರ್, ವಿಜಯ್ ಚೆಂಡೂರ್, ಕಮಲ್, ಮುಬಾರಕ್,ಮೊದಲಾದವರು ನಟಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ನಿಂಗರಾಜು ಕೈ ಜೋಡಿಸಿದ್ದಾರೆ. ಸಿದ್ದರಾಜು ಛಾಯಾಗ್ರಾಹಣವಿದೆ. ಆಕಾಶ್ ಮಹೇಂದ್ರಕರ್ ಸಂಕಲನವಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕೋಟೆ ನಾಡಿನಲ್ಲಿ ನಡೆಯೋ ಕತೆ ಹೇಳಲು ಸಜ್ಜಾದ ” ಚಾಮಯ್ಯ ಸನ್ ಆಫ್ ರಾಮಾಚಾರಿ”

ಕೋಟೆ ನಾಡಿನಲ್ಲಿ ನಡೆಯೋ ಕತೆ ಹೇಳಲು ಸಜ್ಜಾದ ” ಚಾಮಯ್ಯ ಸನ್...

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು

ಕಾಂತಾರ ಚಾಪ್ಟರ್ 1 ಟ್ರೈಲರ್ ಗುಡುಗಿಗೆ ಕುಣಿದೆದ್ದ ಪ್ರೇಕ್ಷಕರು ಅದ್ಬುತ ಸಿನಿಮ್ಯಾಟಿಕ್ ಟ್ರೈಲರ್...

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...