- ಆಸ್ಕರ್ ಟಾಪ್ 15 ಪಟ್ಟಿಯಿಂದ ಲಾಪತಾ ಲೇಡೀಸ್ ಹೊರಕ್ಕೆ, ರೇಸ್ ನಲ್ಲಿ ಉಳಿದಿದೆ ಅನುಜಾ ಡಾಕ್ಯುಮೆಂಟರಿ
- ಬಹುನಿರೀಕ್ಷಿತ ಆಸ್ಕರ್ ಅವಾರ್ಡ್ 2025 ಕ್ಕೆ ಅಧಿಕೃತ ಪ್ರವೇಶ ಪಡೆದಿದ್ದ ಮೂವೀ
- ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಾಪತಾ ಲೇಡೀಸ್
ಈ ವರ್ಷ ರಿಲೀಸ್ ಆದ ಬಾಲಿವುಡ್ ಮೂವಿಗಳಲ್ಲಿ ಹೆಚ್ಚು ಚರ್ಚೆಗೆ ಒಳಪಟ್ಟಿದ್ದ, ಪ್ರಶಂಸೆಗೆ ಕಾರಣವಾಗಿದ್ದ ಕಿರಣ್ ರಾವ್ ಅವರ ನಿರ್ದೇಶನವಿರುವ ಲಾಪತಾ ಲೇಡೀಸ್ ಸಿನಿಮಾ, laapataa ladies movie ಆಸ್ಕರ್ ಅವಾರ್ಡ್ 2025 ರಲದಲಿ 15 ಫೀಚರ್ ಫಿಲ್ಮ್ ಗಳ ಪಟ್ಟಿಯ ಪೈಕಿ ಆಯ್ಕೆಯಾಗಿತ್ತು. ಆದರೆ ಈಗ ಅಂತಿಮವಾಗಿ 5 ಸಿನಿಮಾಗಳು ಆಯ್ಕೆಯಾಗಿವೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್& ಸೈನ್ಸಸ್ ಘೋಷಿಸಿದೆ. ಅದರಲ್ಲಿ ಈ ಸಿನಿಮಾ ಇಲ್ಲದಿರುವುದು ಭಾರತೀಯರಿಗೆ ಬೇಸರ ಉಂಟುಮಾಡಿದೆ.

‘ಲಾಪತಾ ಲೇಡೀಸ್’ ಸಿನಿಮಾವನ್ನು ಅಮೀರ್ ಖಾನ್ ನಿರ್ಮಾಣ ಮಾಡಿದ್ದಾರೆ. ಇದನ್ನು ಆಸ್ಕರ್ಗೆ ಭಾರತದಿಂದ ಅಧಿಕೃತ ಎಂಟ್ರಿಯಾಗಿ ಕಳಿಸಲಾಗಿತ್ತು. ಆದರೆ ಆ ಸಿನಿಮಾ ಟಾಪ್ 5 ರಲ್ಲಿ ಶಾರ್ಟ್ಲಿಸ್ಟ್ ಆಗಿಲ್ಲ. ಹಾಗಾಗಿ ಆಸ್ಕರ್ ರೇಸ್ನಿಂದ ಹೊರ ಬಿದ್ದಿದೆ. ಆದರೆ ಬೇರೆ ವಿಭಾಗದಲ್ಲಿ ಭಾರತೀಯ ಸಿನಿಮಾಗಳು ಇನ್ನೂ ರೇಸ್ನಲ್ಲಿವೆ ಅನ್ನೋದೇ ಖುಷಿ. ಭಾರತೀಯ ಮೂಲದ ಬ್ರಿಟನ್ ಪ್ರಜೆಯಾಗಿರುವ ಸಂಧ್ಯಾ ಸೂರಿ ನಿರ್ದೇಶನದ ‘ಸಂತೋಷ್’ ಸಿನಿಮಾ ವಿದೇಶಿ ಭಾಷೆ ಸಿನಿಮಾ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿದ್ದು, ಅತ್ಯುತ್ತಮ 15 ಸಿನಿಮಾಗಳ ಪಟ್ಟಿಯನ್ನು ಸೇರಿಕೊಂಡಿದೆ.
ಅವಾರ್ಡ್ ಗೆ ಎಂಟ್ರಿ ಆಗಿದ್ದ ಭಾರತೀಯ ಸಿನೆಮಾಗಳ ಇತಿಹಾಸ
ಹೋದ ವರ್ಷ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಗೆದ್ದ ‘ದಿ ಎಲಿಫಂಟ್ ವಿಸ್ಪರ್’ ನ ನಿರ್ಮಾಪಕಿ ಗುನೀತ್ ಮೊಂಗಾ ನಿರ್ದೇಶಿಸಿರುವ ಲೈವ್ ಆಕ್ಷನ್ ಶಾರ್ಟ್ ಸಿನಿಮಾ ‘ಅನುಜಾ’ ಆಸ್ಕರ್ ರೇಸ್ನಲ್ಲಿ ಈ ಬಾರಿ ಉಳಿದುಕೊಂಡಿದೆ.
ಸ್ವಾತಂತ್ರ್ಯ ಪೂರ್ವದ ಕಥಾ ಹಂದರ ಹೊಂದಿರುವ ಲಗಾನ್, ಆಸ್ಕರ್ 2002 ರಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ಸ್ಪರ್ಧಿಸಿ ಟಾಪ್ 5 ಪಟ್ಟಿಯಲ್ಲಿತ್ತು. ನರ್ಗೀಸ್ ಅಭಿನಯದ ಮದರ್ ಇಂಡಿಯಾ ಮತ್ತು ಮೀರಾ ನಾಯರ್ ಅವರ ಸಲಾಮ್ ಬಾಂಬೆ ಗಳು ಈ ಹೆಮ್ಮೆಗೆ ಪಾತ್ರವಾದ ಸಿನಿಮಾಗಳಾಗಿವೆ.