- ವಿಭಿನ್ನವಾಗಿ ಫೋಕಸ್ ಆಗ್ತಿದೆ “ಲಕ್ಷ್ಮೀಪುತ್ರ” ಪೋಸ್ಟರ್
- ಪೋಸ್ಟರ್ ನಲ್ಲಿ ಡಿಫರೆಂಟ್ ಗೆಟಪ್ ನಲ್ಲಿ ಮಿಂಚ್ತಿದ್ದಾರೆ ನಾಯಕ ಚಿಕ್ಕಣ್ಣ
- ವಿಜಯ್ ಎಸ್ ಸ್ವಾಮಿ ಅವರು ನಿರ್ದೇಶಿಸಿದ್ದು, ಕಥೆ ಮತ್ತು ಚಿತ್ರಕಥೆಯನ್ನು ಎಪಿ ಅರ್ಜುನ್ ಬರೆದಿದ್ದಾರೆ.
ಅರ್ಜುನ್ ಎಪಿ Arjun A P ಅವರು ಅರ್ಜುನ್ ಫಿಲ್ಮ್ಸ್ Arjun Films ಬ್ಯಾನರ್ ಅಡಿಯಲ್ಲಿ ಪತ್ನಿ ಅನ್ನಪೂರ್ಣ ಅರ್ಜುನ್ ಅವರೊಂದಿಗೆ “ಲಕ್ಷ್ಮೀಪುತ್ರ” Lakshmiputhra ಚಿತ್ರವನ್ನು ನಿರ್ಮಿಸಿದ್ದಾರೆ. ರವಿಕಿರಣ್ ಗೌಡ ಅವರ ಸಹ ನಿರ್ಮಾಣವಿದೆ. ವಿಜಯ್ ಎಸ್ ಸ್ವಾಮಿ Vijay S Swamy ಅವರು ಆಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಎಪಿ ಅರ್ಜುನ್ ಬರೆದಿದ್ದಾರೆ. ಜೊತೆಗೆ ಪ್ರಶಾಂತ್ ರಾಜಪ್ಪ ಮತ್ತು ವಿಜಯ್ ಈಶ್ವರ್ ಅವರ ಸಹಕಾರವಿದೆ.
ಬಾಳೆಗೊನೆ ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಚಿಕ್ಕಣ್ಣ
ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮೂಲಕ ಛಾಪು ಮೂಡಿಸಿರುವ ಕಾಮಿಡಿಯನ್ ನಟ ಚಿಕ್ಕಣ್ಣ Chikkanna ಇದೀಗ “ಲಕ್ಷ್ಮೀಪುತ್ರ” ಎನ್ನುವ ಚಿತ್ರದ ಮೂಲಕ ನಾಯಕನಾಗಿ ಮಿಂಚಲು ರೆಡಿಯಾಗಿದ್ದಾರೆ. “ಲಕ್ಷ್ಮೀ ಪುತ್ರ” ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್ ನಲ್ಲಿ ಚಿಕ್ಕಣ್ಣ ಕೈಯಲ್ಲಿ ಬಾಳೆಗೊನೆ ಹಿಡಿದು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದು, ಅವರ ವಿಭಿನ್ನ ಗೆಟಪ್ ಗೆ ಪ್ರೇಕ್ಷಕರು ಫುಲ್ ಥ್ರಿಲ್ಲ್ ಆಗಿದ್ದಾರೆ. ಲಕ್ಷ್ಮಿಪುತ್ರ ಚಿತ್ರವನ್ನು ತಾಯಿ ಮಗನ ಸಂಬಂಧದ ಸುತ್ತ ಚಿತ್ರಕತೆ ಹೆಣೆಯಲಾಗಿದ್ದು, ನಟಿ ತಾರಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕೆಲವು ಆ್ಯಕ್ಷನ್ ದೃಶ್ಯಗಳಿಗೆ ರವಿ ವರ್ಮಾ ನಿರ್ದೇಶನವಿದೆ. ಗಿರೀಶ್ ಆರ್ ಗೌಡ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿದೆ. ಧರ್ಮಣ್ಣ ಕಡೂರ್ ಮತ್ತು ಕುರಿ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.