- ಉತ್ತರ ಕರ್ನಾಟಕದ ಕತೆ ಹೇಳಲು ಬರ್ತಿದೆ “ಲಕ್ಷ್ಯ”
- ಇತ್ತೀಚೆಗೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದೆ ಚಿತ್ರತಂಡ
- ಈ ಸಿನಿಮಾ ನೈಜ ಘಟನೆಯುಳ್ಳ ಮಕ್ಕಳ ಚಿತ್ರವಾಗಿದೆ
ಉತ್ತರ ಕರ್ನಾಟಕ ಭಾಗದ ನೈಜ ಕತೆ ಆಧಾರಿತ ಸಿನಿಮಾ “ಲಕ್ಷ್ಯ ” Lakshya ಇನ್ನೇನು ತೆರೆಗೆ ಬರಲು ಸಿದ್ದತೆ ನಡೆಸಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿತು. ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ ಈ ಸಿನಿಮಾ ನೈಜ ಘಟನೆಯುಳ್ಳ ಮಕ್ಕಳ ಚಿತ್ರವಾಗಿದೆ. ಸಾಮ್ರಾಟ ಪ್ರೊಡಕ್ಷನ್ಸ್ Samrat Production ಬ್ಯಾನರಿನಲ್ಲಿ ಅರ್ಜುನ ಪಿ. ಡೊಣೂರ Arjun P Donura ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ನಿರ್ಮಾಣವನ್ನೂ ಮಾಡಿದ್ದಾರೆ.
ಸದ್ಯದಲ್ಲೇ ರಿಲೀಸ್ ಆಗಲಿದೆ ಚಿತ್ರ
ಆರವ್ ರಿಶಿಕ್ Arav Rishik ಅವರು ಸಂಗೀತ ಸಂಯೋಜಿಸಿದ್ದಾರೆ. ಡಾ. ದೊಡ್ಡರಂಗೇಗೌಡ Dr. Doddarangegowda, ಶಂಕರ ಪಾಗೋಜಿ Shankara Pagoji ಹಾಗೂ ಶಿವಾನಂದ ಭೂಶಿ Shivananda Bhooshi ಅವರ ಸಾಹಿತ್ಯವಿದೆ. ಅನಿರುದ್ದ ಶಾಸ್ತ್ರೀ, ಚೇತನ್ ನಾಯಕ್, ಮದ್ವೇಶ್ ಭಾರದ್ವಾಜ್ ಮುಂತಾದವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಎಂ.ಬಿ. ಅಳ್ಳಿಕಟ್ಟಿ ಅವರ ಛಾಯಾಗ್ರಹಣ, ಆರ್. ಮಹಾಂತೇಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಜುಲೈ ಕೊನೆಗೆ ಅಥವಾ ಆಗಸ್ಟ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.