- ರಗಡ್ ಲುಕ್ ನಲ್ಲಿ “ಲ್ಯಾಂಡ್ ಲಾರ್ಡ್” ದುನಿಯಾ ವಿಜಯ್
- ಭೀಮ ಚಿತ್ರದ ಬಳಿಕ ದುನಿಯಾ ವಿಜಯ್ ಹೊಸ ಚಿತ್ರದ ಟೈಟಲ್ ಘೋಷಣೆ
- ಜಡೇಶ್ ಹಂಪಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ “ಲ್ಯಾಂಡ್ ಲಾರ್ಡ್”
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ Duniya Vijay ಅವರ ಜನುಮದಿನದ ಸಂಭ್ರಮದಲ್ಲಿ ವಿಜಯ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಸಿಕ್ಕಿದೆ. ಭೀಮ ಚಿತ್ರದ Bhima Movie ಯಶಸ್ಸಿನ ಬಳಿಕ ದುನಿಯಾ ವಿಜಯ್ ಅವರ ಹೊಸ ಚಿತ್ರದ ಟೈಟಲ್ ರಿವೀಲ್ ಆಗಿದೆ. ಜಂಟಲ್ಮನ್ ಮತ್ತು ಗುರು ಶಿಷ್ಯರು ಚಿತ್ರಗಳ ನಿರ್ದೇಶಕ, ಬ್ಲಾಕ್ಬಸ್ಟರ್ ಕಾಟೇರ ಸಿನಿಮಾದ Kateera Movie ಬರಹಗಾರ ಜಡೇಶ್ ಹಂಪಿ ನಿರ್ದೇಶಿಸುತ್ತಿರುವ “ಲ್ಯಾಂಡ್ ಲಾರ್ಡ್” Land Lord Movie ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದೆ.

ಕೈಯಲ್ಲಿ ಕೊಡಲಿ ಹಿಡಿದು ರಗಡ್ ಲುಕ್ ನಲ್ಲಿ ವಿಜಯ್
ಲ್ಯಾಂಡ್ ಲಾರ್ಡ್ ಸಿನಿಮಾದ ಟೈಟಲ್ ಜೊತೆ ಫಸ್ಟ್ ಲುಕ್ ಪೋಸ್ಸರ್ ಕೂಡಾ ಔಟ್ ಆಗಿದೆ. ಶೇ. 70 ರಷ್ಟು ಚಿತ್ರೀಕರಣ ಪೂರ್ಣಗೊಂಡಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ಹೆಸರು ರಾಚಯ್ಯ ಎಂದಾಗಿದ್ದು, ಎರಡೂ ಕೈಯಲ್ಲಿ ಕೊಡಲಿ ಹಿಡಿದು ರಗಡ್ ಲುಕ್ನಲ್ಲಿ ಮಿಂಚಿದ್ದಾರೆ ವಿಜಯ್. “ಇದು ಆಳಿದವರ ಕತೆಯಲ್ಲ, ಅಳಿದು ಉಳಿದವರ ಕತೆ” ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರದ ಕಥಾಹಂದರ ಭೂಮಿಗೆ ಒಡೆಯನಾಗಬೇಕೆಂದು ಒಹೊರಟವನ ಕತೆಯಗಿದ್ದು, ಅಪ್ಪ-ಮಗಳ ನಡುವಿನ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡಿದೆ.

ಸಿನಿಮಾದಲ್ಲಿ ಮಿಂಚಿದ್ದಾರೆ ರಚಿತಾ ರಾಮ್
ದುನಿಯಾ ವಿಜಯ್ ಗೆ ರಚಿತಾ ರಾಮ್ Rachitha Ram ಜೋಡಿಯಾಗಿ ನಟಿಸಿದ್ದು, ವಿಜಯ್ ಮಗಳು ಮೋನಕಾ, ಉಮಾಶ್ರೀ, ರಂಗಾಯಣ ರಘು, ಅಚ್ಯುತ್ ಕುಮಾರ್, ಬಿ. ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಗಣದಲ್ಲಿದ್ದಾರೆ. ಸಾರಥಿ ಸಿನಿಮಾ ನಿರ್ಮಾಪಕ ಸತ್ಯಪ್ರಕಾಶ್ ಬಂಡವಾಳ ಹೂಡಿದ್ದು, ಚಿತ್ರ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.