2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ

Date:

  • 2025 ರ ದ್ವಿತೀಯಾರ್ಧದಲ್ಲಿ ಸ್ಯಾಂಡಲ್ ವುಡ್ ಧೂಳೀಪಟ ಮಾಡೋ ಸಿನಿಮಾ ಕಹಾನಿ ಇಲ್ಲಿದೆ ನೋಡಿ
  • ಸದ್ಯದಲ್ಲೇ ಹೊರಬರಲಿವೆ ಈ ಸ್ಟಾರ್ ನಟರ ಬಹುನಿರೀಕ್ಷಿತ ಮೂವಿಗಳು
  • ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಲಗ್ಗೆ ಇಡುತ್ತಿರುವ ಮೂವೀಗಳ ಕಥೆ ಹೀಗಿದೆ

2025 ಅರ್ಧ ವರ್ಷ ಕಣ್ಮುಚ್ಚಿ ತೆರೆಯೋದ್ರೊಳಗೆ ಕಳೆದೇ ಹೋಯಿತು. ಈ ಆರು ತಿಂಗಳಲ್ಲಿ ಹಲವು ಮೂವೀಗಳು ತೆರೆ ಮೇಲೆ ಬಂದು ಮ್ಯಾಜಿಕ್ ಮಾಡಿದ್ವು. ಸಿನಿಪ್ರಿಯರ ಮನಸೆಳೆದವು, ಬಾಕ್ಸಾಫೀಸ್ ದೋಚಿದವು. ಹಲವು ಹೊಸ ನಟರು, ನಿರ್ಮಾಪಕರು, ನಿರ್ದೇಶಕರು ಬೆಳ್ಳಿತೆರೆಯಲ್ಲಿ ಪಯಣ ಆರಂಭಿಸಿ ಫೇಮಸ್ಸಾದ್ರು, ಅನುಭವಗಳ ಮೂಲಕ ಪಾಠ ಕಲಿತರು. ಹಾಗಾದ್ರೆ ಈ ವರ್ಷದ ದ್ವಿತೀಯಾರ್ಧ ಹೇಗಿರಲಿದೆ? ಯಾವ ಯಾವ ಸ್ಟಾರ್ ನಟರ ಸಿನಿಮಾಗಳು ತೆರೆಮೇಲೆ ಅಲೆ ಎಬ್ಬಿಸಲಿವೆ? ಸಿನಿಪ್ರಿಯರ ಮನಸ್ಸಿಗೆ ಮುದನೀಡಲಿವೆ ನೋಡೋಣ ಬನ್ನಿ

Upcoming Kannada Movies List 2025:

45 Fourty Five

ರಿಯಲ್ ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ, ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾ “45”. ನನ್ನರಸಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ಕೌಸ್ತುಭ ಮಣಿ ನಾಯಕಿಯಾಗಿ ನಟಿಸಲಿದ್ದು, ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಡೆವಿಲ್ – Devil

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 57ನೇ ಸಿನಿಮಾ “ಡೆವಿಲ್”. ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. 2023 ರಲ್ಲೇ ಮುಹೂರ್ತ ನಡೆದಿದ್ದರೂ ದರ್ಶನ್ ಬಂಧನದಿಂದ ಚಿತ್ರೀಕರಣ ತಡವಾಗಿದ್ದು ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ.

ಕಾಂತಾರ ಚಾಪ್ಟರ್ 1 – Kanthara Chapter 1

2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಫುಲ್ ಹಿಟ್ ಆಗಿದ್ದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾದ ಮುಂದಿನ ಭಾಗ “ಕಾಂತಾರ ಚಾಪ್ಟರ್ ೧” ರಿಷಬ್ ಅವರದೇ ನಾಯಕತ್ದಲ್ಲಿ ಅಕ್ಟೋಬರ್ 2 ಕ್ಕೆ ತೆರೆಗೆ ಬರು ನಿರೀಕ್ಷೆಯಿದೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ನಿರ್ಮಾಣ ಮಾಡುತ್ತಿದ್ದು, ಬಿ ಅಜನೀಶ್ ಲೋಕೇಶ್ ಸಂಗೀತ ನೀಡುತ್ತಿದ್ದಾರೆ.

ಬಿಲ್ಲ ರಂಗ ಭಾಷಾ Billa Ranga Bhasha

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ, ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿರುವ “ಬಿಲ್ಲ ರಂಗ ಭಾಷಾ” ಚಿತ್ರವನ್ನು ಚಿತ್ರವನ್ನುಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ' ಮತ್ತುಕೆ.ಎಸ್.ಕೆ ಶೋ ರೀಲ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. 2025ರ ಏಪ್ರಿಲ್ 16ರಂದು ಬಿಲ್ಲ ರಂಗ ಭಾಷಾ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.2025 ರ ಕೊನೆಯ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

ಕೆಡಿ-ದಿ ಡೆವಿಲ್ – KD The Devil

ಕೆವಿಎನ್ (KVN) ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರುತ್ತಿರುವ ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಮುಡಿಬರುತ್ತಿದೆ “ಕೆಡಿ-ದಿ ಡೆವಿಲ್”. ಈ ಸಿನಿಮಾದಲ್ಲಿ ಬಾಲಿವುಡ್ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಹಲವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಹರಿಹರ ವೀರಮಲ್ಲು – Harihara Veeramallu

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಈ ಹಿಂದೆಂದೂ ಕಾಣದ ಶಕ್ತಿಶಾಲಿ ಐತಿಹಾಸಿಕ ಯೋಧ ವೀರಮಲ್ಲು ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚಿತ್ರ.”ಹರಿಹರ ವೀರಮಲ್ಲು”. ಮೊಘಲ್ ನವಾಬನನ್ನು ಧಿಕ್ಕರಿಸಿದ ಒಬ್ಬ ಧೈರ್ಯಶಾಲಿ ವ್ಯಕ್ತಿಯ ಪ್ರಯಾಣವನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಜುಲೈ 24 ರಂದು ವಿಶ್ವಾದ್ಯಂತ ಬಿಡುಗಡೆಯಾಗುವ ಸಾಧ್ಯತೆಯಿದೆ.

ದಿ ರಾಜಾ ಸಾಬ್ – The Raja Sab

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ “ದಿ ರಾಜಾ ಸಾಬ್” ಚಿತ್ರ ಡಿಸೆಂಬರ್ ನಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮಾರುತಿ ನಿರ್ದೇಶನದ ಈ ಚಿತ್ರ ಹಾರರ್ ಅಂಶಗಳೊಂದಿಗೆ ಜನರಿಗೆ ಮನರಂಜನೆ ನೀಡಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ, ಟಿ ಜಿ ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಟಿ ಮಾಳವಿಕಾ ಮೋಹನನ್, ನಿಧಿ ಅಗರವಾಲ್ ಮತ್ತು ರಿಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಕೊತ್ತಲವಾಡಿ – Kottalavadi

ಶ್ರೀರಾಜ್ ನಿರ್ದೇಶನ, ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ಮತ್ತು ಕಾವ್ಯಾ ಶೈವ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ “ಕೊತ್ತಲವಾಡಿ” ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಗೋಪಾಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದವರು ತಾರಾಗಣದಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ”

ಶೀಘ್ರದಲ್ಲೇ ಬರಲಿದೆ ಚಿತ್ರದುರ್ಗದ ಹೊಸ ಪ್ರತಿಭೆಗಳ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ “ಮಾಯಾವಿ” ಚಿತ್ರದ ಪೋಸ್ಟ್...

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್

ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್ ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ...

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು

ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು “ನಾನು ಮತ್ತು ಗುಂಡ 2”...