- ವಿಭಿನ್ನ ಕಥಾ ಹಂದರದ ಮೂಲಕ ಸಿನಿಪ್ರೇಮಿಗಳಿಗೆ ಮುದನೀಡಲು ಶೀಘ್ರದಲ್ಲೇ ಬರ್ತಿದೆ ”ಲೂಪ್”
- ಯಶವಂತ ಹಾಸನ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ
- ಚಿತ್ರದ ನಾಯಕನಾಗಿ ಶಶಿಕಿರಣ್ ಮತ್ತು ನಾಯಕಿಯಾಗಿ ಶೋಭಿತ ನಟಿಸಿದ್ದಾರೆ.
ಯುವಿ ಪಿಕ್ಚರ್ಸ್ UV Pictures ಸಂಸ್ಥೆಯ ಮೂಲಕ ಉಮೇಶ್ ಕೆ ಎನ್ Umesh K N ಅವರು ನಿರ್ಮಾಣ ಮಾಡುತ್ತಿರುವ “ಲೂಪ್” Loop ಎನ್ನುವ ಹೆಸರಿನ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ. ಯಶವಂತ ಹಾಸನ Yashavantha Hassan ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಅವರೇ ಚಿತ್ರಕಥೆ, ಸಂಭಾಷಣೆ, ಸಾಹಿತ್ಯನ್ನೂ ಹೆಣೆದಿದ್ದಾರೆ. ಚಿತ್ರದ ನಾಯಕನಾಗಿ ಶಶಿಕಿರಣ್ Shashikiran ಮತ್ತು ನಾಯಕಿಯಾಗಿ ಶೋಭಿತ Shobhitha ನಟಿಸಿದ್ದಾರೆ.

ಬಹುತೇಕ ಮುಗಿದಿದೆ ಚಿತ್ರೀಕರಣ
ಗಣೇಶ್, ಮಂಜುಳಾ ಅರಸ್, ಅಭಿಲಾಶ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಸದ್ಯ ”ಲೂಪ್” ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಬೆಂಗಳೂರಿನ ಆಸುಪಾಸಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಹಾಡುಗಳು, ಫ್ಲಾಶ್ ಬ್ಯಾಕ್ ಸನ್ನಿವೇಶದ ಕೆಲಸಗಳು ಪ್ರಗತಿಯಲ್ಲಿದೆ.
ಛಾಯಾಗ್ರಹಕ ಜೀವನ ಗೌಡ ಅವರ ಕ್ರಿಯಾಶೀಲ ಕೆಮರಾ ಕಣ್ಣು ಚಿತ್ರಕ್ಕೆ ಜೊತೆಯಾಗಿದ್ದು,
ಸಂತೋಷ್ ಜೋಶ್ವ ಸುಶ್ರಾವ್ಯವಾದ ಸಂಗೀತ ನೀಡಿದ್ದಾರೆ.
ವಾಸ್ತವಕ್ಕೆ ತುಂಬಾ ಹತ್ತಿರವಾಗಿರುವ ಕಥಾ ವಸ್ತು
ಬೇಕು ಬೇಡ ಎನ್ನುವ ಮನಃಸ್ಥಿತಿ ಮನುಷ್ಯನಲ್ಲಿ ಸಾಮಾನ್ಯ, ಆದರೆ ಇಂತಹ ಮನಃಸ್ಥಿತಿಯ ಮೂಲಕ ತೆಗೆದುಕೊಳ್ಳುವ ಒಂದೊಂದು ನಿರ್ಧಾರಗಳು ಕೂಡ ಹೇಗೆ ನಮ್ಮ ಜೀವನದಲ್ಲಿ ಪರಿಣಾಮ ಬೀರುತ್ತದೆ ಎನ್ನುವ ಸೂಕ್ಷ್ಮವನ್ನು ಚಿತ್ರ ಕಟ್ಟಿಕೊಡುತ್ತದಂತೆ. ವಾಸ್ತವಕ್ಕೆ ತುಂಬಾ ಹತ್ತಿರವಾಗಿರುವ ಕಥಾ ವಸ್ತುವನ್ನೇ ನಿರ್ದೇಶಕರು ಆಯ್ದುಕೊಂಡಿರುವುದು ವಿಶೇಷ. ವಿಭಿನ್ನ ಕಥಾ ಹಂದರದ ಮೂಲಕ “ಲೂಪ್” ಚಿತ್ರತಂಡ ಪ್ರೇಕ್ಷಕರ ನಿರೀಕ್ಷೆಗಳನ್ನೂ ಹೆಚ್ಚಿಸಿದೆ. ಶೀಘ್ರದಲ್ಲಿ “ಲೂಪ್” ತೆರೆಗಪ್ಪಳಿಸುವ ಸಾಧ್ಯತೆ ಇದೆ.