- ಫಸ್ಟ್ ಲುಕ್ ನಲ್ಲೇ ಮನಸೆಳೆಯುತ್ತಿದೆ ಮಡೆನೂರು ಮನು ಅಭಿನಯದ “ಕುಲದಲ್ಲಿ ಕೀಳ್ಯಾವುದೋ” ಚಿತ್ರ
- ಚಿತ್ರದ ಫಸ್ಟ್ ಲುಕ್, ಹೊಸವರ್ಷದ ಮೊದಲ ದಿನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಬಿಡುಗಡೆ
- ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಚಿತ್ರಕ್ಕಿದೆ.
ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣ ಮಾಡಿರುವ, ಯೋಗರಾಜ್ ಭಟ್ ಅವರ ಕಥೆಯನ್ನು ಆಧರಿಸಿ ಕೆ ರಾಮ್ ನಾರಾಯಣ್ ಅವರು ನಿರ್ದೇಶಿಸಿರುವ ಚಿತ್ರ “ಕುಲದಲ್ಲಿ ಕೀಳ್ಯಾವುದೋ”. Kulalli Keelyavudo Movie ಕಾಮಿಡಿ ಕಿಲಾಡಿಗಳು ಸೀಸನ್ 2 ರ ವಿನ್ನರ್ ಮಡೆನೂರು ಮನು Madenur Manu ಹಾಗೂ ಮೌನ ಗುಡ್ಡೆಮನೆ Mouna Guddemane ನಾಯಕ, ನಾಯಕಿಯಾಗಿ ಚಿತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಹೊಸವರ್ಷದ ಮೊದಲ ದಿನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಮೃತ ಹಸ್ತದಿಂದ ಅನಾವರಣಗೊಂಡಿದೆ. ಹಾಗೇ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ, ಧೃವ ಸರ್ಜಾ. ಫಸ್ಟ್ ಲುಕ್ ಗೆ ಪ್ರೇಕ್ಷಕರ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದ್ದು ಚಿತ್ರದ ಮೇಲೆ ನೋಡುಗರ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ.

ಉತ್ತಮ ಕಂಟೆಂಟ್ ಹೊಂದಿರುವ ಈ ಚಿತ್ರದ ಕಥಾಹಂದರ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಪ್ರೇಕ್ಷಕರು ಕುತೂಹಲಿಗಳಾಗಿದ್ದು ಟೀಸರ್, ಟ್ರೈಲರ್ ಬಿಡುಗಡೆಗೆ ಕಾಯುವಂತಾಗಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ರಾಮ್ ನಾರಾಯಣ್ ಮುಂತಾದವರ ಸಾಹಿತ್ಯವಿದೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿನೆಯಿದೆ. ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ದಿಗಂತ್, ರಂಗಾಯಣ ರಘು, ಶರತ್ ಲೋಹಿತಾಶ್ವ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
