ಸದಾ ಒಂದಿಲ್ಲೊಂದು ಹೊಸ ರೀತಿಯ ಮೂವಿಗಳನ್ನೇ ನೀಡ್ತಾ ಜನರ ಮನ ಸೆಳೆದಿರುವ ನಟ ಉಪೇಂದ್ರ. ಇವ್ರ ಹೊಸ ಚಿತ್ರ UI ನ ವಾರ್ನರ್ ಈಗ ಜನರ ಮನಸೆಳೀತಿದೆ. ಟೀಸರ್ ನ ನಂತರ ಟ್ರೇಲರ್ ಕಡೆ ಹೋಗದೇ ವಾರ್ನರ್ ಬಿಡುಗಡೆಮಾಡಿದೆ ಚಿತ್ರತಂಡ.
ರಿಯಲ್ ಸ್ಟಾರ್ ಉಪೇಂದ್ರ ಅವ್ರೇ ನಟಿಸಿ, ನಿರ್ದೇಶಿಸಿರುವ ಈ ಮೂವಿ ಡಿಸೆಂಬರ್ 21 ಕ್ಕೆ ತೆರೆಯ ಮೇಲೆ ಬರಲಿದ್ದು, ವಾರ್ನರ್ ನೋಡಿರುವ ಅಭಿಮಾನಿಗಳಿಗೆ ಅಲ್ಲಿಯವರೆಗೆ ಕಾಯುವುದೇ ಕುತೂಹಲವಾಗಿದೆ. 2040 ರಲ್ಲಿ ಜಗತ್ತಿನ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಸಾಂಕೇತಿಕವಾಗಿ ಇದ್ರಲ್ಲಿ ಬಿಂಬಿಸಲಾಗಿದೆ. ಮನೋರಂಜನೆಯೇ ಮುಖ್ಯ ಉದ್ದೇಶವಾಗಿದ್ದರೂ ಪ್ರೇಕ್ಷಕರನ್ನು ಸೀರಿಯಸ್ ಆಗಿ ಈ ಚಿತ್ರ ಚಿಂತನೆಗೆ ಒಡ್ಡಬಹುದೇನೋ, ಕಾದು ನೋಡಬೇಕಿದೆ.
ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್‍ಟೈನರ್ಸ್ ಬ್ಯಾನರ್ ನಡಿಯಲ್ಲಿ ಜಿ. ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ ಚಿತ್ರ ನಿರ್ಮಾಪಕರಾಗಿದ್ದಾರೆ. ಸ್ವತಃ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ತಾರಾಗಣದಲ್ಲಿ ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದ ಘಟಾನುಘಟಿಗಳ ಬಳಗವೇ ಇದೆ.