- ಮಾರ್ಚ್ 28 ರಂದು ಮನ ಮುದಗೊಳಿಸಲು ಬರುತ್ತಿದೆ “ಮನದ ಕಡಲು”
- ಮುಂಗಾರುಮಳೆ ಕಾಂಬಿನೇಷನ್ ನ ಹೊಸ ಚಿತ್ರ “ಮನದ ಕಡಲು”
- ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ ಸುಮುಖ
ಕೆಲವು ವರ್ಷಗಳ ಹಿಂಗೆ ರಿಲೀಸ್ ಆಗಿ ಸಿನಿಮಾ ಕ್ಷೇತ್ರದಲ್ಲಿ, ಜನರ ಹೃದಯದಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಮುಂಗಾರುಮಳೆ. ಇದರ ನಿರ್ಮಾಪಕರಾಗಿದ್ದ ಈ ಕೃಷ್ಣಪ್ಪ ಅವರ ನಿರ್ದೇಶನದ ಹೊಸಚಿತ್ರ “ಮನದ ಕಡಲು”. ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್. ಜನರ ಮನಸ್ಸಿಗೆ ಮುದನೀಡಲು ಚಿತ್ರ ಮಾರ್ಚ್ 28 ರಂದು ತನ್ನ ಕಹಾನಿ ಬಿಚ್ಚಿಡಲಿದೆ.
ಮುಖ್ಯಭೂಮಿಕೆಯಲ್ಲಿ ಘಟಾನುಘಟಿಗಳು
ಈಗಾಗಲೇ ಈ ಚಿತ್ರದ ಟೀಸರ್, ಟ್ರೇಲರ್ ಸಕ್ಕತ್ ವ್ಯೂಸ್ ಪಡೆದಿದ್ದು, ಹಾಡುಗಳು ಹಿಟ್ ಆಗಿವೆ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ ಭಟ್ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ವಿನೋದ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮತ್ತು ಮುರಳಿ, ಕಂಬಿ ರಾಜು , ಗೀತಾ ಸಾಯಿ ಅವರ ನೃತ್ಯ ನಿರ್ದೇಶನವಿದೆ. ಯೋಗರಾಜ್ ಭಟ್, ಗಡ್ಡ ವಿಜಿ ಹಾಗೂ ಅಮೋಲ್ ಪಾಟೀಲ್ ಚಿತ್ರಕಥೆ ಬರೆದಿದ್ದಾರೆ. ಜನಮಾನಸ ಗೆಲ್ಲಲಿದೆಯೇ ಮನದ ಕಡಲು ಕಾದು ನೋಡಬೇಕಿದೆ.