- ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್
- ಹೊರಬಂತು ಸದ್ಯದಲ್ಲೇ ಬಿಡುಗಡೆಯಾಗಲಿರುವ “ಸೂರ್ಯ” ಚಿತ್ರದ ಹಾಡು
- ಸಿನಿರಸಿಕರ ಗಮನ ಸೆಳೆಯುತ್ತಿದೆ ಪ್ರಶಾಂತ್, ಹರ್ಷಿತಾ ಜೋಡಿ
ನಂದಿ ಸಿನಿಮಾಸ್ Nandi Cinemas ಬ್ಯಾನರ್ ಅಡಿಯಲ್ಲಿ ಬಸವರಾಜ್ ಎಂ. ಬಿನ್ನಿ Basavaraj M Benni ಹಾಗೂ ರವಿ ಎಂ. ಬಿನ್ನಿ Ravi M Benni ಬಂಡವಾಳ ಹೂಡಿರೋ ಸಿನಿಮಾ “ಸೂರ್ಯ- ದಿ ಪವರ್ ಆಫ್ ಲವ್” Surya- The Power of Love ಸಿನಿಮಾ ತಯಾರಾಗಿದ್ದು, ಆಕ್ಷನ್ ಕಟ್ ಹೇಳಿದ್ದಾರೆ ಸಾಗರ್ Sagar. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಪ್ರಶಾಂತ್ Prashanth ಹಾಗೂ ಹರ್ಷಿತಾ Harshitha ಜೋಡಿ ಮುಖ್ಯಭೂಮಿಕೆಯಲ್ಲಿದೆ. ಪಿ.ರವಿಶಂಕರ್, ಶೃತಿ ಕೃಷ್ಣ, ಪ್ರಮೋದ್ ಶೆಟ್ಟಿ, ಟಿ.ಎಸ್. ನಾಗಾಭರಣ, ಕಡ್ಡಿಪುಡಿ ಚಂದ್ರು, ಬಾಲ ರಾಜವಾಡಿ ಮುಂತಾದವರು ತಾರಾಗಣದಲ್ಲಿದ್ದಾರೆ.

ಗುಂಗು ಹಿಡಿಸುತ್ತಿದೆ “ಮರಳಿದೆ ಜೀವ”
ಚಿತ್ರದ ಮೆಲೋಡಿ ಸಾಂಗ್ “ಮರಳಿದೆ ಜೀವ” Maralide Jeeva ಇತ್ತೀಚೆಗಷ್ಟೇ ಎ2 ಮ್ಯೂಸಿಕ್ A2 Music ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಫುಲ್ ಸೌಂಡ್ ಮಾಡ್ತಿದೆ. ಪ್ರಮೋದ್ ಮರವಂತೆ Pramod Maravanthe ಸಾಹಿತ್ಯಕ್ಕೆ ಸಂಗೀತ ನೀಡಿದ್ದಾರೆ ಶ್ರೀ ಸಾಸ್ಥ Shri Sastha. ರಜತ್ ಹೆಗ್ಡೆ Rajath Hegde, ಪೃಥ್ವಿ ಭಟ್ Prithvi Bhat ಧ್ವನಿ ಮೋಡಿ ಮಾಡುವಂತಿದೆ. ಮನುರಾಜ್ ಡಿ.ಬಿ.ಹಳ್ಳಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಮಣಿಕಂಠ ಕೆ.ವಿ. ಸಂಭಾಷಣೆಯಿದ್ದು, ಈ ತಿಂಗಳಲ್ಲಿ ಚಿತ್ರ ಅದ್ಧೂರಿ ತೆರೆ ಕಾಣಲಿದೆ.





