- ರಾಜ್ಯದೆಲ್ಲೆಡೆ ಮ್ಯಾಕ್ಸ್ ಅಬ್ಬರ..!
- ಹೊಸ ವರ್ಷಕ್ಕೆ ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ
ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ Max movie ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಕಲೆಕ್ಷನ್ ಮಾಡುತ್ತಿದೆ. ಕಿಚ್ಚ ಸುದೀಪ್ ಅವರಿಗೆ ಕೇವಲ ಕರುನಾಡಿನಲ್ಲಿ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಇದಕ್ಕೆ ಕೈಗನ್ನಡಿಯೇ ಮ್ಯಾಕ್ಸ್ ಚಿತ್ರಕ್ಕೆ ಆಂಧ್ರ ಮತ್ತು ತಮಿಳುನಾಡಿನಲ್ಲಿ ಸಿಕ್ಕಿರುವ ಪ್ರತಿಕ್ರಿಯೆ. ಒಂದು ರಾತ್ರಿಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರವು ಸುದೀಪ್ ಅಭಿಮಾನಿಗಳಿಗೆ ಹಾಗೂ ಆಕ್ಷನ್ ಪ್ರಿಯರಿಗೆ ತುಂಬಾ ಇಷ್ಟವಾಗಿದೆ.
ಹೊಸ ವರ್ಷಕ್ಕೆ ಚಿತ್ರದಗಳಿಕೆ ಹೆಚ್ಚಾಗುವ ನಿರೀಕ್ಷೆ;
ಕನ್ನಡದಲ್ಲಿ ತೆರೆಗೆ ಬಂದು ಎಲ್ಲರ ಮನ ಗೆದ್ದ ಮ್ಯಾಕ್ಸ್ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಿದೆ. ಅಲ್ಲಿನ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಹಲವೆಡೆ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ. ಹೊಸ ವರ್ಷದ ಸಮಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ‘ವಿಕ್ರಾಂತ್ ರೋಣ’ ಬಳಿಕ ರಿಲೀಸ್ ಆದ ಸಿನಿಮಾ ಇದು ಎಂಬ ಕಾರಣಕ್ಕೂ ಸಿನಿಮಾ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಆ ನಿರೀಕ್ಷೆಯನ್ನು ತಲುಪಲು ‘ಮ್ಯಾಕ್ಸ್’ ಯಶಸ್ವಿ ಆಗಿದೆ. ಸುದೀಪ್ ಅಭಿಮಾನಿಗಳು ಹಾಗೂ ಆಯಕ್ಷನ್ ಪ್ರಿಯರಿಗೆ ಸಿನಿಮಾ ಇಷ್ಟ ಆಗಿದೆ.
