- ಜನವರಿ 24ಕ್ಕೆ ತೆರೆಗೆ ಬರಲಿದೆ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”
- ರಾಹುಲ್ ಅಮೀನ್ ನಿರ್ದೇಶನದ ತುಳು ಚಿತ್ರ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”
- ಬಿಡುಗಡೆಗೆ ಮೊದಲೇ ಯುಎಇ ನಲ್ಲಿ ದಾಖಲೆ ಮೂಡಿಸಿದ ಚಿತ್ರ
ಯುವ ನಟ, ನಿರ್ದೇಶಕ ರಾಹುಲ್ ಅಮೀನ್ ಆಕ್ಷನ್-ಕಟ್ ಹೇಳಿರುವ, ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಅರ್ಪಿಸುವ, ಎಚ್‌ಪಿಆರ್ ಫಿಲ್ಮ್ಸ್ ಹರಿ ಪ್ರಸಾದ್ ರೈ ಸಹಯೋಗದಲ್ಲಿ ಆನಂದ್ ಕುಂಪಲರವರ ನಿರ್ಮಾಣ ಇರುವ ತುಳು ಚಿತ್ರ “ಮಿಡ್ಲ್ ಕ್ಲಾಸ್ ಫ್ಯಾಮಿಲಿ”ಯ Middle Class Family movie ಚಿತ್ರೀಕರಣ ಪೂರ್ಣಗೊಂಡಿದ್ದು, ಜನವರಿ 24ರಂದು ತೆರೆಗೆ ಬರಲಿದೆ.
ಯುಎಇನಲ್ಲಿ ದಾಖಲೆ ಬರೆದ ಚಿತ್ರ
ದುಬೈನಲ್ಲಿ ಜ.18,19 ಕ್ಕೆ ಈ ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಇದರ ಟಿಕೆಟ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. 1500 ಕ್ಕೂ ಹೆಚ್ಚು ಟಿಕೆಟ್ ಗಳು ಮಾರಾಟವಾಗಿದ್ದು, ಈಗಾಗಲೇ 30 ಲಕ್ಷ ರೂಗಳನ್ನು ಪ್ರಾಯೋಜಕರ ಮೂಲಕ ಗಳಿಸಿ ಹೊಸ ದಾಖಲೆ ಬರೆದಿದೆ.

ಜನರ ಮನರಂಜಿಸಲು ರೆಡಿಯಾಗಿದೆ ಚಿತ್ರತಂಡ
ವಿನೀತ್ ಕುಮಾರ್ ಮತ್ತು ಸಮತಾ ಅಮೀನ್ ನಾಯಕ-ನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ, ರವಿ ರಾಮಕುಂಜ ಮೊದಲಾದವರು ಕಾಣಿಸಿಕೊಂಡಿದ್ದಾರೆ. ವಿನೀತ್ ಕುಮಾರ್ ಕತೆ, ಪ್ರಸನ್ನ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತವಿದ್ದರೆ, ವಿಷ್ಣು ಪ್ರಸಾದ ಅವರ ಕ್ಯಾಮೆರಾ ಚಳಕವಿದೆ.