- ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ನಲ್ಲಿ ಬರಲಿದ್ದಾರೆ ಇನ್ನಷ್ಟು ಸ್ಪರ್ಧಿಗಳು
- ಶೋ 118 ದಿನಕ್ಕೆ ವಿಸ್ತರಣೆ? ಪ್ರೇಕ್ಷಕರು ಫುಲ್ ಖುಷ್
- ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುವವರಿಗಾಗಿ ನಿರೀಕ್ಷೆ !
ಬಿಗ್ ಬಾಸ್ 60 ದಿನಗಳನ್ನು ಪೂರೈಸಿದೆ. ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಶೋ ಅನ್ನು ಇದೀಗ 118 ದಿನಗಳಿಗೆ ವಿಸ್ತರಿಸಲಾಗಿದೆಯಂತೆ. ಪ್ರತಿ ವಾರ ಬಿಗ್ ಬಾಸ್ Bigg Boss Kannada ಮನೆಯಲ್ಲಿ 2-3 ಮಾತ್ರ ವೈಲ್ಡ್ ಕಾರ್ಡ್ ಎಂಟ್ರಿಗಳು ಇರುತ್ತಿತ್ತು. ಅಲ್ಲದೇ ಈ ಸೀಸನಲ್ಲಂತೂ ಮೂರನೇ ವಾರದಲ್ಲೇ ಮೂರು ವೈಲ್ಡ್ ಕಾರ್ಡ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಈಗ ಮತ್ತೊಂದಷ್ಟು ಮಂದಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲು ಸಿದ್ದತೆ ನಡೆಸಿದ್ದಾರೆ. ಈ ಬೆಳವಣಿಗೆ ವೀಕ್ಷಕರಿಗೆ ಅಚ್ಚರಿ ಹುಟ್ಟಿಸಿದೆ.
ಪಾರ್ಟಿಯಲ್ಲಿ ಗೆಸ್ಟ್ ಎಂಟ್ರಿ:
ಅಂದ ಹಾಗೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಭಾರೀ ಪಾರ್ಟಿ ಆಯೋಜನೆ ಮಾಡಲಾಗುತ್ತಿದ್ದು, ಈ ಪಾರ್ಟಿಗೆ ಹೊರಗಿನಿಂದ ಅತಿಥಿಗಳು ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅದರಲ್ಲಿ ಮೋಕ್ಷಿತಾ, ಚೈತ್ರಾ, ಮಂಜು ಸೇರಿದಂತೆ ಅನೇಕರು ಬಂದಿದ್ದಾರೆ. ಇನ್ನೂ ಕೆಲವರು ಮನೆಗೆ ಎಂಟ್ರಿ ಕೊಡುವವರಿದ್ದಾರೆ. ಇದರಲ್ಲಿ ಒಂದಷ್ಟು ಮಂದಿಗಳನ್ನು ವೈಲ್ಡ್ ಕಾರ್ಡ್ ಆಗಿ ದೊಡ್ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ನಲ್ಲಿ ಈ ಬಾರಿಯ ಥೀಮ್ ಎಕ್ಸ್ಪೆಕ್ಟ್ ದಿ ಅನ್ ಎಕ್ಸ್ಪೆಕ್ಟ್. ಈ ಕಾರಣದಿಂದಲೇ ಬಿಗ್ ಬಾಸ್ನಲ್ಲಿ ಮೂರನೇ ವಾರದಲ್ಲೇ ಫಿನಾಲೆ ಆಯೋಜನೆ ಮಾಡಿತು. ಆ ಬಳಿಕ ಮೂವರು ವೈಲ್ಡ್ ಕಾರ್ಡ್ನ ಒಟ್ಟಿಗೆ ಕರೆತರಲಾಯಿತು. ಈಗ ಮತ್ತೊಂದಷ್ಟು ವೈಲ್ಡ್ ಕಾರ್ಡ್ನ ಪರಿಚಯಿಸಲು ವಾಹಿನಿ ಡಿಸೈಡ್ ಮಾಡಿದೆ.
ಶೋ ವಿಸ್ತರಣೆ: ಪ್ರೇಕ್ಷಕರು ಖುಷ್
ಸಾಮಾನ್ಯವಾಗಿ 100 ದಿನ ಶೋ ನಡೆಯುತ್ತದೆ. ಕೆಲವೊಮ್ಮೆ ಇದನ್ನು ವಿಸ್ತರಿಸಲಾಗುತ್ತದೆ. ಈ ಬಾರಿಯೂ ಶೋ ನ್ನು ವಿಸ್ತರಿಸಲು ಯೋಜನೆ ವಾಹಿನಿಗಿದೆ. ಹಾಗಾಗಿ ಈ ಬಾರಿ ಶೋ 118 ದಿನ ನಡೆಯಲಿದೆಯಂತೆ. ಹೀಗಾಗಿ, ಎರಡನೇ ರೌಂಡ್ನಲ್ಲಿ ಒಂದಷ್ಟು ವೈಲ್ಡ್ ಕಾರ್ಡ್ ಸ್ಪರ್ಧಿಗಳು ದೊಡ್ಮನೆಯ ಪ್ರವೇಶ ಮಾಡುತ್ತಿದ್ದಾರೆ. ಯಾರು ಯಾರು ಎಂಟ್ರಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.


