- ವೀಕೆಂಡ್ ಗೆ ಒಟಿಟಿಯಲ್ಲಿ ಈ ಚಿತ್ರಗಳನ್ನು ನೀವು ಆಸ್ವಾದಿಸಬಹುದು
- ಬೇರೆ ಬೇರೆ ಒಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ರಿಲೀಸ್ ಆಗಿವೆ ಕನ್ನಡ ಮೂವಿಗಳು
ರಿಪ್ಪನ್ ಸ್ವಾಮಿ Rippanswamy
ಆಗಸ್ಟ್ 29 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ “ರಿಪ್ಪನ್ ಸ್ವಾಮಿ” ಚಿತ್ರ ಇದೀಗ ಅಮೆಜಾನ್ ಪ್ರೈಂ Amazon Prime ನಲ್ಲಿ ಲಭ್ಯವಿದೆ. ವಿಜಯ್ ರಾಘವೇಂದ್ರ Vijay Raghavendra, ಅಶ್ವಿನಿ ಚಂದ್ರಶೇಖರ ನಾಯಕತ್ವದ ಸಿನಿಮಾಕ್ಕೆ ಕಿಶೋರ್ ಮೂಡಬಿದ್ರೆ Kishor Moodbidri ಆಕ್ಷನ್ ಕಟ್ ಹೇಳಿದ್ದಾರೆ. ಪಂಚಾನನ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ ಚಿತ್ರ.
ಮಿರಾಯ್ Mirai
ಚಿತ್ರಮಂದಿರಗಳಲ್ಲಿ ಫುಲ್ ಸದ್ದು ಮಾಡಿದ್ದ “ಮಿರಾಯ್” ಚಿತ್ರವು ಇದೀಗ ಕನ್ನಡ, ತೆಲಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಜಿಯೋ ಹಾಟ್ ಸ್ಟಾರ್ Jio Hot Star ಒಟಿಟಿಯಲ್ಲಿ ಅಕ್ಟೋಬರ್ 10 ರಿಂದ ಲಭ್ಯವಿದೆ. ಕಾರ್ತಿಕ್ ಘಟ್ಟಮನೇನಿ Karthik Ghattamaneni ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ತೇಜ ಸಜ್ಜಾ, ಮಂಚು ಮನೋಜ್, ರಿತಿಕಾ ನಾಯಕ್, ಶ್ರಿಯಾ ಸರನ್, ಜಯರಾಮ್, ಜಗಪತಿ ಬಾಬು ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್, ಕೃತಿ ಪ್ರಸಾದ್, ಕುಚಿಬೋಟ್ಲಾ ನಿರ್ಮಾಣವಿದೆ.


