- ಅರಿಷಡ್ವರ್ಗಗಳನ್ನು ಬಿಂಬಿಸುವ ಚಿತ್ರ “ನಾಗವಲ್ಲಿ ಬಂಗಲೆ” ಫೆ.28 ರಂದು ತೆರೆಗೆ
- ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಅವರಿಂದ ಅನಾವರಣವಾಯಿತು ಚಿತ್ರದ ಟೀಸರ್ ಹಾಗೂ ಪೋಸ್ಟರ್
- ವಿಭಿನ್ನ ಕಂಟೆಂಟ್ ಹೊಂದಿರುವ ಹಾರಾರ್ ಜಾನರ್ ಚಿತ್ರ “ನಾಗವಲ್ಲಿ ಬಂಗಲೆ”
ಹಂಸ ವಿಷನ್ಸ್ ಲಾಂಛನದಲ್ಲಿ ನೆ.ಲ.ಮಹೇಶ್ ಹಾಗೂ ನೇವಿ ಮಂಜು ನಿರ್ಮಾಣ ಮಾಡುತ್ತಿರುವ ಚಿತ್ರ “ನಾಗವಲ್ಲಿ ಬಂಗಲೆ”. Nagavalli Bangale Movie ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ಕವಿ ರಾಜೇಶ್. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಯಾಯಿತು. ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಟೀಸರ್ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಮಾಜಿ ಉಪ ಮಹಾಪೌರರಾದ ಪುಟ್ಟರಾಜು Puttaraju ಅವರು ಸಹ ಈ ಸಂದರ್ಭದಲ್ಲಿದ್ದರು.

ಕಂಟೆಂಟ್ ಓರಿಯೆಂಟೆಡ್ ಹಾರರ್ ಜಾನರ್
ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳು ಮುಖ್ಯ ಪಾತ್ರವಹಿಸಿತ್ತವೆ. ಇವುಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳಿರುತ್ತದೆ. ಆರು ಜನ ಹುಡುಗಿಯರು ಈ ಆರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆರು ಪಾತ್ರಗಳು “ನಾಗವಲ್ಲಿ ಬಂಗಲೆ” ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎಂಬುದೆ ಚಿತ್ರದ ಕಥಾ ಹಂದರ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ತಿಳಿಸಿರುತ್ತಾರೆ. ಇದು ಹಾರರ್ ಜಾನರ್ ಚಿತ್ರವಾದರೂ ಕೊನೆಯಲ್ಲಿ ದೆವ್ವ,ಭೂತಗಳೆಲ್ಲಾ ಸುಳ್ಳು, ಎಲ್ಲವೂ ಕಲ್ಪನೆ, ನಮ್ಮ ಮನಸ್ಸಿನ ಭ್ರಮೆ ಎಂಬುದನ್ನು ಈ ಚಿತ್ರದ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ.

ನಾಗವಲ್ಲಿ ಪಾತ್ರಧಾರಿಯಾಗಿ ತೇಜಸ್ವಿನಿ ಮಿಂಚಲಿದ್ದಾರೆ. ಚಿತ್ರದಲ್ಲಿ ಅರಿಷಡ್ವರ್ಗಗಳನ್ನು ಸಿಮ್ರಾನ್, ಮಾನಸ, ರೂಪಶ್ರೀ, ಸುಷ್ಮ, ರಂಜಿತ, ಶ್ವೇತ ಪ್ರತಿನಿಧಿಸಲಿದ್ದಾರೆ. ಉಳಿದಂತೆ ನಾಯಕ ನಟನಾಗಿ ಯಶ್, ನೆ.ಲ.ನರೇಂದ್ರ ಬಾಬು, ನೇವಿ ಮಂಜು ಮುಂತಾದವರು ತಾರಾಗಣದಲ್ಲಿದ್ದಾರೆ. ನೃತ್ಯ ನಿರ್ದೇಶನ ತ್ರಿಭುವನ್ ಮಾಡಿದ್ದಾರೆ. ಇದೇ ಫೆ.28 ರಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.





