- ಮೇ 9 ಕ್ಕೆ ತೆರೆ ಮೇಲೆ ಬರಲಿದೆ “ನಾಳೆ ರಜಾ ಕೋಳಿ ಮಜಾ”
- ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡ್ತಿದೆ.
- ಸಾಕಷ್ಟು ರಾಷ್ಟ್ರೀಯ, ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ, ಮೆಚ್ಚುಗೆ ಗಳಿಸಿರುವ ಚಿತ್ರ
ಕೋಳಿ ತಾಳ್ Koli Taal ಎಂಬ ವಿಭಿನ್ನ ಕಥಾಹಂದರದ ಸಿನಿಮಾ ನಿರ್ದೇಶಸಿ ಖ್ಯಾತರಾಗಿದ್ದ, ಅಭಿಲಾಷ್ ಶೆಟ್ಟಿ Abhilash Shetty ಪ್ಲಾನ್ ಎ ಫಿಲ್ಮ್ಸ್ Plan A Films ಬ್ಯಾನರ್ ಅಡಿಯಲ್ಲಿ ಕಥೆ, ನಿರ್ದೇಶನ, ನಿರ್ಮಾಣ ಮಾಡಿರುವ ವಿಶಿಷ್ಟ ಚಿತ್ರ “ನಾಳೆ ರಜಾ ಕೋಳಿ ಮಜಾ” Naale Rajaa Koli Majaa ತನ್ನ ಹೆಸರಿನಿಂದಲೇ ಸಿನಿಮಾಸಕ್ತರಲ್ಲಿ ಕುತೂಹಲ ಮೂಡಿಸುತ್ತಿದೆ. ಇದರ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದು ಫುಲ್ ಸದ್ದು ಮಾಡ್ತಿದೆ. ಹಲವು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಿನಿಮಾ ಇದೀಗ ಮೇ 9 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ಸಹಜ ಅಭಿನಯದಿಂದ ಮನಗೆಲ್ಲುವ ಪುಟ್ಟ ಹುಡುಗಿ
ಗಾಂಧಿ ಜಯಂತಿಯ ದಿನ ಮದ್ಯ ಹಾಗೂ ಮಾಂಸಾಹಾರ ಮಾರಾಟ ನಿಷಿದ್ಧವೆಂಬ ಸಂಗತಿ ಎಲ್ಲರಿಗೂ ತಿಳಿದದ್ದೇ. ಈ ದಿನ ಕೋಳಿ ತಿನ್ನಬೇಕೆಂಬ ಆಸೆಯಾಗಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವ, ಕಷ್ಟಪಡುವ ಪುಟ್ಟ ಹುಡುಗಿಯ ಕಥೆಯೇ ಈ ಚಿತ್ರದ ಕಥಾಹಂದರ. ತನ್ನ ಸಹಜ ಅಭಿನಯದ ಮೂಲಕ ಹುಡುಗಿಯ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾಳೆ ಬಾಲ ಕಲಾವಿದೆ ಸಮೃದ್ಧಿ ಕುಂದಾಪುರ. ಜೊತೆಗೆ ಸಾನಿಧ್ಯ ಆಚಾರ್ಯ, ಪ್ರಭಾಕರ್ ಕುಂದರ್, ರಾಧಾ ರಾಮಚಂದ್ರ ಮುಂತಾದವರ ನಟನೆ ಚಿತ್ರಕ್ಕಿದೆ. ಎಂ.ಆರ್ ಪ್ರಹಾಸ್ತ್ ಸಂಗೀತ, ಸ್ವರೂಪ್ ಯಶ್ವನಾಥ್ ಛಾಯಾಗ್ರಹಣ, ಅಕ್ಷಯ್ ಕುಮಾರ್ ಶೆಟ್ಟಿ ಸಹನಿರ್ದೇಶನ ಚಿತ್ರಕ್ಕೆ ಮೆರುಗು ತಂದಿದೆ.