- ಶೂಟಿಂಗ್ ಮುಗಿಸಿದ “ಗಣಿ ಬಿ.ಕಾಂ. ಪಾಸ್-2”
- 2019 ರಲ್ಲಿ ಬಿಡುಗಡೆಯಾಗಿದ್ದ “ನಮ್ ಗಣಿ ಬಿ.ಕಾಂ. ಪಾಸ್” ಚಿತ್ರದ ಮುಂದಿನ ಭಾಗ ಇದಾಗಿರಲಿದೆ.
- ಅಭಿಷೇಕ್ ಶೆಟ್ಟಿ ನಿರ್ದೇಶನ ಹಾಗೂ ನಾಯಕತ್ವದ ಸಿನಿಮಾ “ಗಣಿ ಬಿ.ಕಾಂ. ಪಾಸ್”
ಕೌಟುಂಬಿಕ ಪ್ರೇಕ್ಷಕರ ಗಮನ ಸೆಳೆದಿದ್ದ ಮಾಸ್ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿದ್ದ “ನಮ್ ಗಣಿ ಬಿ.ಕಾಂ. ಪಾಸ್” ಚಿತ್ರದ ಮುಂದುವರೆದ ಭಾಗ “ಗಣಿ ಬಿ.ಕಾಂ. ಪಾಸ್-2” Mam Gani b.com pass 2 Movie ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾ ಫ್ಯಾಮಿಲಿ ಡ್ರಾಮಾವಾಗಿದ್ದು ಕೌಟುಂಬಿಕ ಮೌಲ್ಯಗಳನ್ನು, ಭಾವನೆಗಳನ್ನು ಒಳಗೊಂಡಿದೆ.
ಮುಖ್ಯಭೂಮಿಕೆಯಲ್ಲಿರುವ ಘಟಾನುಘಟಿಗಳು
ಅಭಿಷೇಕ್ ಶೆಟ್ಟಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅವರೇ ಸ್ವತಃ ನಾಯಕನಾಗಿ ಮಿಂಚಿದ್ದು, ಹೃತಿಕಾ ಶ್ರೀನಿವಾಸ್, ದಿವ್ಯಾ ಸುರೇಶ್, ಸುಧಾ ಬೆಳವಾಡಿ, ಜಹಾಂಗೀರ್, ರಾಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜ್ ವಿಕ್ರಮ್ ಸಂಗೀತ ಸಂಯೋಜನೆ ಇದ್ದು, ಬಿ.ಎಸ್. ಪ್ರಶಾಂತ್ ಶೆಟ್ಟಿ ಹಾಗೂ ಪ್ರಶಾಂತ್ ರೆಡ್ಡಿಅದ್ವಿ ಕ್ರಿಯೇಷನ್ಸ್ ಹಾಗೂ 786 ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.


