- ನಾಯಿ ಮತ್ತು ಯಜಮಾನನ ಭಾವನಾತ್ಮಕ ಬಾಂಧವ್ಯದ ಪಯಣವಿದು
- “ನಾನು ಮತ್ತು ಗುಂಡ 2” ಸೆಪ್ಟೆಂಬರ್ 5 ರಂದು ರಿಲೀಸ್
- “ಓಂ ಶಿವಾಯ, ನಮೋ ಶಿವಾಯ” ಭಕ್ತಿಗೀತೆಯನ್ನು ಬಿಡುಗಡೆ ಮಾಡಿದೆ ಚಿತ್ರತಂಡ
“ನಾನು ಮತ್ತು ಗುಂಡ” Nanu Mattu Gunda ಚಿತ್ರದಲ್ಲಿ ಪ್ರೇಕ್ಷಕರ ಮನಗೆದ್ದ ನಾಯಿ ಮತ್ತು ಅದರ ಯಜಮಾನನ ನಡುವಿನ ಭಾವನಾತ್ಮಕ ಬಾಂಧವ್ಯವು ಇದೀಗ “ನಾನು ಮತ್ತು ಗುಂಡ 2” ಚಿತ್ರದಲ್ಲಿ ಮತ್ತೆ ತೆರೆಮೇಲೆ ಬರಲು ಸಿದ್ಧವಾಗಿದೆ. ರಘು ಹಾಸನ್ Raghu Hassan ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವು ಸೆಪ್ಟೆಂಬರ್ 5 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರತಂಡ “ಓಂ ಶಿವಾಯ, ನಮೋ ಶಿವಾಯ” Om Shivaya Namo Shivaya ಭಕ್ತಿಗೀತೆಯನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಆರ್.ಪಿ. ಪಟ್ನಾಯಕ್ R P Patnayk ಅವರ ಸಂಗೀತ ಸಂಯೋಜನೆ, ಡಾ. ವಿ ನಾಗೇಂದ್ರ ಪ್ರಸಾದ್ Dr. V Nagendra Prasad ಅವರ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ Vijaya Prakash ಅವರ ಗಾಯನವಿದೆ. “ನಾನು ಮತ್ತು ಗುಂಡ” ಮೊದಲ ಭಾಗದಲ್ಲಿ ಶಂಕರ್ ನಿಧನರಾದ ನಂತರ, ಅವರ ಮಗ ರಾಕೇಶ್ ಅಡಿಗ ನಿರ್ವಹಿಸಿದ ಪಾತ್ರ ಮತ್ತು ನಾಯಿಯ ಸುತ್ತ ಕಥೆಯು “ನಾನು ಮತ್ತು ಗುಂಡ-2” ನಲ್ಲಿ ಮುಂದುವರಿಯುತ್ತದೆ ಎನ್ನುತ್ತೆ ಚಿತ್ರತಂಡ.
ರಚನಾ ಇಂದರ್ Rachana Indar ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಪೊಯೆಮ್ ಪಿಕ್ಚರ್ಸ್ Poem Pictures ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ ನಾನು ಮತ್ತು ಗುಂಡ 2 ನಲ್ಲಿ ಆರು ಹಾಡುಗಳಿವೆ. ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತವಿದೆ. ಮುಂದಿನ ಭಾಗವು ಸಿಂಬಾ ಜೂನಿಯರ್, ಸಿಂಬಾ ಎಂಬ ನಾಯಿಯನ್ನು ಪರಿಚಯಿಸುತ್ತದೆ. ಭಾವನಾತ್ಮಕ ಕತೆಯಿರುವ ಈ ಚಿತ್ರ ಎಮೋಷನಲ್ ಚಿತ್ರ ಪ್ರೇಮಿಗಳಿಗೆ ಖಂಡಿತವಾಗಿಯೂ ಇಷ್ಟವಾಗಬಹುದು ಎನ್ನುವುದು ಚಿತ್ರತಂಡದ ನಂಬಿಕೆ.