- ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು
- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ಚಿತ್ರ ವಿಭಾಗದ ಪ್ರಶಸ್ತಿ
- “ಕಂದೀಲು”, “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” ಚಿತ್ರಗಳಿಗೆ ಪ್ರಶಸ್ತಿಯ ಗರಿ
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಪ್ರಾದೇಶಿಕ ಚಿತ್ರ ವಿಭಾಗಗಳಲ್ಲಿ ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳ 13 ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಘೋಷಿಸಲಾಗಿದ್ದು “ಕಂದೀಲು” ಚಿತ್ರವು Kandeelu kannada film ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ. ಅಪ್ಪಟ ಮಣ್ಣಿನ ಪರಿಮಳವಿರುವ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ ಮೂಡಿರುವುದು ಕನ್ನಡ ಚಿತ್ರರಂಗವೇ ಹೆಮ್ಮೆ ಪಟ್ಟಿದೆ. ಇನ್ನು ಬೆಸ್ಟ್ ಸ್ಕ್ರಿಪ್ಟ್ (ನಾನ್ ಫೀಚರ್ ಫಿಲ್ಮ್) ವಿಭಾಗದಲ್ಲಿ ಮೈಸೂರಿನ ಡಾ. ಚಿದಾನಂದ ನಾಯಕ್ Dr. Chidananda Nayak ನಿರ್ದೇಶನದ ಕಿರುಚಿತ್ರ “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” Sunflowers Were the First Ones to Know ಪ್ರಶಸ್ತಿಗೆ ಆಯ್ಕೆಯಾಗಿದೆ.
ಕನ್ನಡದ ಮಣ್ಣಿನ ಪರಿಮಳ ಚಿತ್ರ “ಕಂದೀಲು”
ರಾಷ್ಟ್ರ ಪಶಸ್ತಿ ಪಡೆದ “ಕಂದೀಲು” ಚಿತ್ರವನ್ನು ಕೆ ಯಶೋಧಾ ಪ್ರಕಾಶ್ K Yashodha Prakash ಅವರು ನಿರ್ದೇಶನ ಮಾಡಿದ್ದಾರೆ. ಸ್ವಸ್ತಿಕ್ ಎಂಟರ್ಟೈನ್ಮೆಂಟ್ Swastik Entertainment ಅವರ ನಿರ್ಮಾಣದ ಚಿತ್ರ ಇದಾಗಿದೆ. ಈ ಚಿತ್ರದ ಕತೆಯು ರೈತ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಗ್ರಾಮೀಣ ಭಾಗದ ಜನರ ಜೀವನಾಧಾರಿತ ಅಂಶಗಳು ಈ ಚಿತ್ರದಲ್ಲಿದ್ದು ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ.
ಹಳ್ಳಿಯ ಕತೆ ಹೇಳಿ ಗೆದ್ದ “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು”
ಮೈಸೂರಿನ ವೈದ್ಯ ಡಾ. ಚಿದಾನಂದ ಎಸ್. ನಾಯಕ್ ನಿರ್ದೇಶನದ “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” ಕಿರುಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಈ ಹಿಂದೆ ಈ ಕಿರುಚಿತ್ರ ಪ್ರತಿಷ್ಠಿತ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ “ಲಾ ಸಿನೆಫ್ ಪ್ರಶಸ್ತಿ” ಮುಡಿಗೇರಿಸಿಕೊಂಡಿತ್ತು. ತನ್ನ ಹಳ್ಳಿಯಿಂದ ಹುಂಜವೊಂದನ್ನು ಕದ್ದು ಸಮುದಾಯವನ್ನು ಕತ್ತಲೆಯಲ್ಲಿ ಮುಳುಗಿಸುವ ವೃದ್ಧ ಮಹಿಳೆಯ ಕುರಿತಾದ ಜಾನಪದ ಕಥೆಯನ್ನು ಈ ಕಿರುಚಿತ್ರದಲ್ಲಿ ಹೇಳಲಾಗಿದೆ.