- ಘರ್ಜಿಸಿತು ತುಳುನಾಡಿನ ಮಾಸ್ ಚಿತ್ರ “ನೆತ್ತೆರೆಕೆರೆ”ಯ ಟ್ರೈಲರ್
- ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿದೆ “ನೆತ್ತೆರೆಕೆರೆ”
- ಆಗಸ್ಟ್ 29ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಮಾಸ್ ಮೂವಿ
ಕರಾವಳಿಯ ವಿಭಿನ್ನ ಸೊಗಡಿನ ಆಕ್ಷನ್ – ಥ್ರಿಲ್ಲರ್ ತುಳು ಚಿತ್ರ “ನೆತ್ತೆರೆಕೆರೆ” Netterekere ಟ್ರೈಲರ್ ಬಿಡುಗಡೆಯಾಗಿದ್ದು ಅದ್ದೂರಿತನದಲ್ಲಿ ಸಖತ್ ಗಮನಸೆಳೆಯುತ್ತಿದೆ. ತುಳು ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರವಾಗಿರುವ “ನೆತ್ತರೆಕೆರೆ”ಯಲ್ಲಿ ತುಳುನಾಡಿನ ರೋಚಕ ದೃಶ್ಯಾವಳಿಗಳು ಮತ್ತು ಕಥಾನಕವಿದೆ. ಟ್ರೈಲರ್ ಕೂಡ ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ. ತುಳು, ಕನ್ನಡ, ತಮಿಳು, ಮಲಯಾಲಂ, ಹಿಂದಿ, ತೆಲುಗಿನಲ್ಲೂ ಆಗಸ್ಟ್ 29ರಂದು ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಮಾಸ್ ಮೂವಿ “ನೆತ್ತೆರೆಕೆರೆ” ಬಗ್ಗೆ ಪ್ರೇಕ್ಷಕರೂ ಕಾತರರಾಗಿದ್ದಾರೆ.
ತುಳುನಾಡಿನ ರೋಚಕ ದೃಶ್ಯಾವಳಿಗಳು
ಅಸ್ತ್ರ ಪ್ರೊಡಕ್ಷನ್ Astra Production ಲಾಂಛನದಲ್ಲಿ ಸ್ವರಾಜ್ ಶೆಟ್ಟಿSwaraj Shetty ಆಕ್ಷನ್ ಕಟ್ ಹೇಳಿ, ಕತೆ, ಸಂಭಾಷಣೆಯ ಜೊತೆಗೆ ನಟನಾಗಿ ಮಿಂಚಿರುವ ಚಿತ್ರವಿದು. ಲಂಚುಲಾಲ್ ಕೆ ಎಸ್ Lanchulal K S ಚಿತ್ರ ನಿರ್ಮಾಣ ಮಾಡಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ನಾಯಕಿಯಾಗಿ ದಿಶಾಲಿ ಪೂಜಾರಿ Dishali Pojary ಸಾಥ್ ನೀಡಿದ್ದಾರೆ. ವಿಶೇಷ ಪಾತ್ರದಲ್ಲಿ ಲಂಚುಲಾಲ್ ಕೆ.ಎಸ್, ನಟ ಸುಮನ್ ತಲ್ವಾರ್, ಅಭಿನಯಿಸಿದ್ದಾರೆ. ಕ್ಯಾಮರಾದಲ್ಲಿ ಉದಯ ಬಲ್ಲಾಳ್, ಸಂಗೀತದಲ್ಲಿ ವಿನೋದ್ ರಾಜ್ ಕೋಕಿಲಾ, ಸಂಕಲನದಲ್ಲಿ ಗಣೇಶ್ ನೀರ್ಚಾಲ್, ಸಾಹಸದಲ್ಲಿ ಮಾಸ್ ಮಾದ, ಟೈಗರ್ ಶಿವ ಸಾಥ್ ನೀಡಿದ್ದಾರೆ.
ಪಕ್ಕಾ ಪ್ರಾದೇಶಿಕ ಫೀಲ್
ಉಳಿದಂತೆ ಪೃಥ್ವಿನ್ ಪೊಳಲಿ, ಯುವ ಶೆಟ್ಟಿ, ಅನಿಲ್ ಉಪ್ಪಳ, ಪುಷ್ಪರಾಜ್ ಬೊಳ್ಳೂರು, ವಿಜಯ ಮಯ್ಯ, ನೀತ್ ಪೂಜಾರಿ, ಉತ್ಸವ ವಾಮಂಜೂರು, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ ಉಪಿರ, ಭವ್ಯಾ ಪೂಜಾರಿ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಭೂಮಿಕೆಯಲ್ಲಿದ್ದಾರೆ.ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ನಲ್ಲಿ ಪಕ್ಕಾ ಪ್ರಾದೇಶಿಕ ಫೀಲ್ ಕಾಣಿಸುತ್ತಿರುವುದು, ಸಿನಿಮಾ ಬಗ್ಗೆಯೂ ಕೌತುಕ ಹುಟ್ಟಿಸಿದೆ.