ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

Date:

  • ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”
  • ಹೊಸ ರಿಯಾಲಿಟಿ ಶೋ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ.
  • ಜನಪ್ರಿಯ ನಟಿ ಅಮೂಲ್ಯ , ತಾರಾ ಅನುರಾಧ ಮತ್ತು ಖ್ಯಾತ ನಟ ಶರಣ್ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಝೀ ಕನ್ನಡ Zee Kannada ವಾಹಿನಿಯಲ್ಲಿ ಹೊಸತೊಂದು ರಿಯಾಲಿಟಿ ಶೋ ಶುರುವಾಗಲಿದ್ದು, ಈ ರಿಯಾಲಿಟಿ ಶೋ ಇಡೀ ಫ್ಯಾಮಿಲಿಯನ್ನೇ ಒಳಗೊಳ್ಳುವ ವಿಭಿನ್ನ ಮಾದರಿಯ ರಿಯಾಲಿಟಿ ಶೋ ಎನ್ನುವುದು ವಿಶೇಷ. ಹೌದು ಈ ಹೊಸ ನ ಹೆಸರು “ನಾವು ನಮ್ಮವರು” Navu Nammavaru ಈ ಹೊಚ್ಚ ಹೊಸ ರಿಯಾಲಿಟಿ ಶೋ ಇದೇ ಆಗಸ್ಟ್ 2 ರಿಂದ ರಾತ್ರಿ 9 ಗಂಟೆಗೆ ನಿಮ್ಮನ್ನು ಮನರಂಜಿಸಲಿದೆ.

ಸೆಲೆಬ್ರಿಟಿ ಮತ್ತು ಫ್ಯಾಮಿಲಿ

ಈ ಶೋನಲ್ಲಿ ವೀಕ್ಷಕರು ತಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸಕ್ಕತ್ ಟ್ವಿಸ್ಟ್ , ಸ್ವಲ್ಪ ಫನ್, ಫೀಲಿಂಗ್ ಎಲ್ಲವೂ ಈ ಶೋನಲ್ಲಿರಲಿದ್ದು ಪಕ್ಕಾ ಮನೋರಂಜನೆಯನ್ನಂತೂ ನೀಡಿಯೇ ನೀಡುತ್ತದಂತೆ. ಪ್ರತಿ ವಾರವೂ ವಿಭಿನ್ನ ಬಗೆಯ ರೌಂಡ್ಸ್ ಇರಲಿದ್ದು ಈ ರೌಂಡ್ಸ್ ಗಳಲ್ಲಿ ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಎನ್ನುವುದು ಪ್ರೇಕ್ಷಕರಿಗೆ ಒಂದು ದೊಡ್ಡ ಅಚ್ಚರಿಯಾಗಿದೆ. ಈಗ ಬಂದಿರೋ ಅಪ್ಡೇಟ್ ಪ್ರಕಾರ, ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ Niranjan Deshapande ಅವರು ಈ ಶೋ ವನ್ನು ನಿರೂಪಣೆ ಮಾಡಲಿದ್ದಾರೆ. ನಟಿ ಅಮೂಲ್ಯ, Amulya ಜನಪ್ರಿಯ ನಟಿ ತಾರಾ ಅನುರಾಧ Thara Anuradha ಮತ್ತು ಖ್ಯಾತ ನಟ ಶರಣ್ Sharan ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇವರೆಲ್ಲಾ ಭಾಗಹಿಸಲಿದ್ದಾರೆ

ಸೆಲೆಬ್ರಿಟಿಗಳಾದ ರಜತ್-ಅಕ್ಷತಾ, ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಸಮೀರ್ ಆಚಾರ್ಯ-ಶ್ರಾವಣಿ ಮೊದಲಾದವರು ತಮ್ಮ ಕುಟುಂಬದವರೊಡನೆ ಸೇರಿ ಈ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಅಂತೂ ಇಂತೂ ಒಂದೊಳ್ಳೆ ಶೋ ಗಾಗಿ ಕಿರುತೆರೆ ವೀಕ್ಷಕರು ಕಾಯುವಂತಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...