- ಮನದ ಕಡಲುನಲ್ಲಿ ಮಿಂಚುತ್ತಿರುವ ಹೊಸ ಪ್ರತಿಭೆಗಳು
- ಯೋಗರಾಜ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರೀಕರಣ ಪೂರ್ಣ
- 18 ವರ್ಷದ ಬಳಿಕ ಮತ್ತೆ ಯೋಗರಾಜಭಟ್, ಇ.ಕೃಷ್ಣಪ್ಪ ಜೋಡಿ ಚಿತ್ರ
ಸ್ಯಾಂಡಲ್ ವುಡ್ ನಲ್ಲಿ ಹಿಟ್ ಆಗಿದ್ದ ಮುಂಗಾರು ಮಳೆ ಚಿತ್ರದ ಯೋಗರಾಜ್ ಭಟ್ Yogaraj Bhat ಮತ್ತು ಇ. ಕೃಷ್ಣಪ್ಪ ಜೋಡಿ ಮನದ ಕಡಲು Manada Kadalu Movie ಚಿತ್ರದೊಂದಿಗೆ ಮತ್ತೆ ಮುನ್ನಲೆಗೆ ಬರುತ್ತಿದೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, 2025 ಮೊದಲಾರ್ಧದಲ್ಲಿ ತೆರೆಗೆ ಬರುವ ಸಂಭವವಿದೆ.

ಚಿತ್ರದಲ್ಲಿದ್ದಾರೆ ಘಟಾನುಘಟಿಗಳು
ಜಯಂತ ಕಾಯ್ಕಿಣಿ ಅವರ ಸಾಹಿತ್ಯಕ್ಕೆ ವಿ ಹರಿಕೃಷ್ಣ ಅವರ ಸಂಗೀತವಿದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಇಕೆ ಎಂಟರ್ಟೈನರ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ನಾಯಕ ನಟನಾಗಿ ಉದಯೋನ್ಮುಖ ಪ್ರತಿಭೆ ಸುಮುಖ ನಾಯಕ ನಟನಾಗಿದ್ದು, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿದ್ದಾರೆ. ರಂಗಾಯಣ ರಘು, ದತ್ತಣ್ಣ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.