- ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್
- ದೀಪಕ್ ಎಸ್ ಅವಂದಕರ್ ನಿರ್ದೇಶನದಲ್ಲಿ ಮೂಡಿ ಬಂದಿದೆ “ವಿಕ್ಕಿ”
- ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರೆತಿದ್ದು ಮೇ ತಿಂಗಳಲ್ಲಿ ತೆರೆಗೆ ಬರಲಿದೆ
ಕೇಸರಿನಂದನ ಸಿನಿ ಕ್ರಿಯಷನ್ಸ್ Kesarinandana Cini Creations ಬ್ಯಾನರ್ ಅಡಿಯಲ್ಲಿ ನವನೀತ ಲಕ್ಷ್ಮಿ Navaneetha Lakshmi ನಿರ್ಮಾಣದ “ವಿಕ್ಕಿ” Vicky ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ದಾವಣಗೆರೆ ಮೂಲಕ ದೀಪಕ್ ಎಸ್ ಅವಂದಕರ್. Deepak S Avandakar ಹೊಸಪ್ರತಿಭೆ ಭರತ್ ತಾಳಿಕೋಟೆ Bharath Thalikote ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಇವರಿಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ ವಿಂಧ್ಯ ಹೆಗಡೆ. Vindhya Hegade ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಮಾಲತಿ ಸುಧೀರ್ Malathi Sudheer ಹಾಗೂ ನಟ ನವೀನ್ ಶಂಕರ್ Naveen Shankar ಅವರಿಂದ ಬಿಡುಗಡೆಗೊಂಡಿದ್ದು, ಮೇ ತಿಂಗಳ ಎರಡನೇ ವಾರದಲ್ಲಿ ಚಿತ್ರ ತೆರೆಯ ಮೇಲೆ ಬಿಡುಗಡೆಗೊಳ್ಳಲಿದೆ.
ಮಧ್ಯಮ ವರ್ಗದ ಯುವಕನ ಕಥೆ
ಕಾಮಿಡಿ ಜಾನರ್ ಚಿತ್ರ “ವಿಕ್ಕಿ”ಯಲ್ಲಿ ಮಧ್ಯಮ ವರ್ಗದ ಯುವಕನ ಕನಸು, ನನಸುಗಳ ಸುತ್ತ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ನಿರೂಪಿಸಲಾಗಿದೆ. ಜೊತೆಗೊಂದಿಷ್ಟು ನಿಗೂಢತೆಯೂ ಅಡಕವಾಗಿದೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ 35 ದಿನಗಳು ಚಿತ್ರೀಕರಣ ನಡೆದಿದೆ. ಆರವ್ ರಿಶಿಕ್ Arav Rishik ಸಂಗೀತ ಸಂಯೋಜನೆಯಿದ್ದು, ಹಿನ್ನಲೆ ಸಂಗೀತವೇ ಚಿತ್ರದ ಹೈಲೈಟ್. ಶಂಕು ಛಾಯಾಗ್ರಹಣ, ಭಾರ್ಗವ್ ಕೆ.ಎಮ್. ಸಂಕಲನ ಚಿತ್ರಕ್ಕಿದೆ. ರಾಜು ತಾಳಿಕೋಟೆ, ಶ್ರೀನಿಧಿ ಗೌಡ, ಮಂಜು, ರವಿಶೆಟ್ಟಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.