- ಸೆಪ್ಟೆಂಬರ್ 12 ರಂದು ಆವರಿಸಲಿದೆ ನಿದ್ರಾದೇವಿ Next Door
- ಟ್ರೈಲರ್, ತುಂಬಾ ಕ್ರಿಯೇಟಿವ್ ಆಗಿದ್ದು ಕುತೂಹಲ ಕೆರಳಿಸುತ್ತಿದೆ
- ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಯನ್ನು ಹೊಂದಿದೆ ಸ್ಯಾಂಡಲ್ ವುಡ್
ಚೆಂದದ ಲವ್ ಸ್ಟೋರಿ ಜೊತೆಗೆ ನಿದ್ರೆ ಇಲ್ಲದ ವ್ಯಕ್ತಿಯ ಕತೆಯನ್ನು ಆಕರ್ಷಕವಾಗಿ ಹೇಳುವ “ನಿದ್ರಾದೇವಿ Next Door” Nidradevi Next Door ಚಿತ್ರದ ಟ್ರೈಲರ್ ರಿಲೀಸಾಗಿದೆ. ಟ್ರೈಲರ್, ತುಂಬಾ ಕ್ರಿಯೇಟಿವಾಗಿದ್ದು ಕುತೂಹಲ ಕೆರಳಿಸುತ್ತಿದೆ. ಸೆಪ್ಟೆಂಬರ್ 12 ರಂದು ಚಿತ್ರ ತೆರೆಗಪ್ಪಳಿಸಲಿದ್ದು ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಯನ್ನು ಸ್ಯಾಂಡಲ್ ವುಡ್ ಹೊಂದಿದೆ. ನಟ ಪ್ರವೀರ್ ಶೆಟ್ಟಿ Praveer Shetty ಮತ್ತು ರಿಷಿಕಾ ನಾಯಕ್ Rishika Nayak ಅಭಿನಯದ ನಿದ್ರಾದೇವಿ Next Door ಚಿತ್ರವನ್ನು ಸುರಾಗ್ ಸಾಗರ್ Surag Sagar ನಿರ್ದೇಶಿಸಿದ್ದಾರೆ.
ತಾರಾಬಳಗದಲ್ಲಿದ್ದಾರೆ ಇವರೆಲ್ಲಾ…
ಈ ಚಿತ್ರವನ್ನು ನಿರ್ಮಾಪಕರಾದ ಜಯರಾಮ್ ದೇವಸಮುದ್ರ Jayaram Devasamudra ಅವರು ತಮ್ಮ ಸುರಮ್ ಮೂವೀಸ್ Suram Movies ಬ್ಯಾನರ್ನಡಿಯಲ್ಲಿ ನಿರ್ಮಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ Shain Shetty, ಶ್ರುತಿ ಹರಿಹರನ್ Shruthi Hariharan, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ Sudharani ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀವತ್ಸ, ಅನೂಪ್, ಐಶ್ವರ್ಯ ಗೌಡ , ಮಾಸ್ಟರ್ ಸುಜಯ್ ರಾಮ್, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ನಿದ್ರೆಯಂತೆ ಸವಿಯಾಗಿದೆ ಟ್ರೈಲರ್
ಈ ಸಿನಿಮಾಗೆ ನಕುಲ್ ಅಭ್ಯಂಕರ್ ಅವರ ಸಂಗೀತ, ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ, ಊಲಾಸ್ ಹೈದೂರ್ ಅವರ ಪ್ರೊಡಕ್ಷನ್ ಡಿಸೈನ್, ಯುವ ಸಿನಿಮಾ ಖ್ಯಾತಿಯ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಮತ್ತು ಹೇಮಂತ್ ಕುಮಾರ್ ಡಿ ಅವರ ಸಂಕಲನವಿದೆ. ಇದೀಗ ನಿದ್ರಾದೇವಿ Next Door ಚಿತ್ರದ ಟ್ರೈಲರ್ ನಿದ್ರೆಯಂತೆ ಸವಿಯಾಗಿದೆ. ಚಿತ್ರವೂ ಅಷ್ಟೇ ಸವಿಯಾಗಿರಬಹುದು ಎನ್ನುವ ನಿರೀಕ್ಷೆ ಪ್ರೇಕ್ಷಕರದ್ದು.