- ತೆಲುಗು ಬಿಗ್ ಬಾಸ್ ಕಿರೀಟ ಗೆದ್ದ ಮೈಸೂರಿನ ನಿಖಿಲ್.!
- ಸಂತಸ ವ್ಯಕ್ತಪಡಿಸಿದ ಕನ್ನಡಿಗರು
ತೆಲುಗು ಬಿಗ್‌ಬಾಸ್ ಸೀಸನ್ 8ರಲ್ಲಿ ಕನ್ನಡಿಗ ನಿಖಿಲ್ ರವರು ಭಾಗವಹಿಸಿ ವಿನ್ನರ್ ಆಗುವ ಮೂಲಕ ತೆಲುಗು ಬಿಗ್ ಬಾಸ್ ನ ಕೀರಿಟ ತಮ್ಮದಾಗಿಸಿಕೊಂಡಿದ್ದಾರೆ.

ಟ್ರೋಫಿ ನೀಡಿ ಅಭಿನಂದಿಸಿದ ನಟ ರಾಮಚರಣ್!
ನಿಖಿಲ್ ರವರು ಮೂಲತಃ ಮೈಸೂರಿನವರಾಗಿದ್ದು, ಯೂಟ್ಯೂಬರ್ ಕೂಡ ಹೌದು. ಇವರು ತೆಲುಗಿನ ಕೆಲವು ಧಾರವಾಹಿ ಹಾಗೂ ಚಿತ್ರರಂಗದಲ್ಲಿ ನಂಟು ಬೆಳೆಸಿಕೊಂಡಿದ್ದರು. ನಂತರ ಸೆಪ್ಟೆಂಬರ್ 1ರಂದು ತೆಲುಗು ಬಿಗ್ ಬಾಸ್ ಪ್ರವೇಶ ಮಾಡಿದ್ದರು. ಇದೀಗ ಕನ್ನಡಿಗ ನಿಖಿಲ್ ಬಿಗ್ ಬಾಸ್ ಟ್ರೋಪಿಯ ವಾರಸುದಾರರಾಗಿದದ್ದು, ಫಿನಾಲೆಗೆ ಅತಿಥಿಯಾಗಿ ಬಂದಿದ್ದ ನಟ ರಾಮಚರಣ್ ರವರು ನಿಖಿಲ್‌ಗೆ ಬಿಗ್‌ಬಾಸ್ ಟ್ರೋಫಿ ನೀಡಿ, ಅಭಿನಂದಿಸಿದ್ದಾರೆ. ಕನ್ನಡದ ಹುಡುಗ ನಿಖಿಲ್ ರವರು ತೆಲುಗು ಬಿಗ್ ಬಾಸ್ ಸೀಸನ್ 8ರ ವಿಜೇತರಾಗಿದ್ದಕ್ಕೆ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.