- ನಿಮಗೊಂದು ಸಿಹಿಸುದ್ದಿ ಸಿನಿಮಾ ಮೋಷನ್ ಪೋಸ್ಟರ್ ಲಾಂಚ್.!
ನಿಮಗೊಂದು ಸಿಹಿ ಸುದ್ದಿ ಈ ವರ್ಷದ ಅಚ್ಚರಿ ಮತ್ತು ವಿಶೇಷ ಈ ಸಿನಿಮಾ. ಬಿಡುಗಡೆಗೆ ಸಿದ್ದವಿರೋ ಈ ಚಿತ್ರದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಯುವಕನೊಬ್ಬ ಗರ್ಭಧರಿಸಿ ಜಗತ್ತಿನಲ್ಲಿ ಅದ್ಭುತ ಅಚ್ಚರಿ ಹುಟ್ಟಿಸೋ ವಿಚಾರದ ಸುತ್ತಾ ಹೆಣೆದಿರೋ ಚಿತ್ರ ನಿಮಗೊಂದು ಸಿಹಿ ಸುದ್ದಿ. Nimagondu Sihi Suddi Movie ಚಿತ್ರರಂಗದಲ್ಲಿ ಒಂದಷ್ಟು ಅನುಭವ ಹೊಂದಿ, ಈ ಮೂಲಕ ಸ್ವತಂತ್ರ ಸಿನಿಮಾ ಮಾಡಿದ್ದಾರೆ ನಟ ನಿರ್ದೇಶಕ ಬರಹಗಾರ ಬಹುಮುಖ ಪ್ರತಿಭೆ ರಘು ಭಟ್. ಅವ್ಯಕ್ತ ಸಿನಿಮಾಸ್ ಸಂಸ್ಥೆಯ ಹರೀಶ್ ಎನ್ ಗೌಡರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೂಕ್ಷ್ಮ ಹಾಗೂ ವಿಶಿಷ್ಟ ಕಥಾಹಂದರವನ್ನ ಹೊಂದಿರೋ ಈ ಚಿತ್ರದಲ್ಲಿ ರಘು ಭಟ್ ಗೆ ಜೊತೆಯಾಗಿ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್ ಮತ್ತು ಪ್ರಜ್ವಲ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ. ಆನಂದ್ ಸುಂದ್ರೇಶ್ ಅವರ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತ, ನವೀನ್ ತೇಜ್ ಮತ್ತು ರಘುನಾಥ್ ಎಲ್ ರವರ ಸಂಕಲನ ಚಿತ್ರಕ್ಕಿದೆ. ತಾಂತ್ರಿಕವಾಗಿ ಹಾಗೂ ಕಥಾ ವಸ್ತು ವಿಚಾರವಾಗಿ ಭರವಸೆ ಮೂಡಿಸುತ್ತಿರೋ ನಿಮಗೊಂದು ಸಿಹಿ ಸುದ್ದಿ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ.