- ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ ರಿಲೀಸ್.!
- ದಿಲೀಪ್ ರಾಜ್ ಅಭಿನಯದ ಸಿನಿಮಾ
ದಿಲೀಪ್ ರಾಜ್ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಹೆಸರು ಮಾತ್ರವಲ್ಲ ಸಿನಿಮಾ ಮಂದಿಗೂ ಪರಿಚಯ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹಿಟ್ಲರ್ ಕಲ್ಯಾಣ’ Hitler Kalyana Serial ಧಾರಾವಾಹಿಯಲ್ಲಿ ನಾಯಕ ಎಜೆ ಆಲಿಯಾಸ್ ಅಭಿರಾಮ್ ಜಯಶಂಕರ್ Abhiram Jayshankar ಆಗಿ ಅಭಿನಯಿಸಿ ಸೀರಿಯಲ್ ವೀಕ್ಷಕರ ಮನ ಸೆಳೆದಿದ್ದ ದಿಲೀಪ್ ರಾಜ್ ಇದೀಗ ಮಗದೊಮ್ಮೆ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ Nimma Vasthugalige Neeve Javaabdaararu movie ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ದಿಲೀಪ್ ರಾಜ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ಇವರು ರಂಜಿಸಿಲಿದ್ದಾರೆ. ಕಳೆದ ವರ್ಷ ತೆರೆಕಂಡಿರುವ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾದಲ್ಲಿಯೂ ಮುಖ್ಯ ಭೂಮಿಕೆಯಲ್ಲಿ ದಿಲೀಪ್ ರಾಜ್ ಕಾಣಿಸಿಕೊಂಡಿದ್ದರು. ಮಾತ್ರವಲ್ಲ ಅದು ಸಿನಿ ಪ್ರಿಯರ ಮೆಚ್ಚುಗೆಗೂ ಕೂಡಾ ಪಾತ್ರವಾಗಿತ್ತು.
ಇದೀಗ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಸಿನಿಮಾ ಇಂದು ರಿಲೀಸ್ ಆಗಿದೆ.